119
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಭಾನುವಾರ ಭೇಟಿ ನೀಡುತ್ತಿರುವುದಕ್ಕೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಪ್ರತಿಕ್ರಿಯೆ ನೀಡಿರುವ ಭೈರಪ್ಪ ಅವರು, ಮೋದಿ ಆರ್ ಎಎಸ್ ಕಚೇರಿಗೆ ತೆರಳುತ್ತಿರುವುದನ್ನು ತಿಳಿದು ಸಂತೋಷವಾಯಿತು. ಕೆಲ ತಿಂಗಳುಗಳ ಹಿಂದೆ ನಾನು ನಾಗ್ಪುರದಲ್ಲಿರುವ ಸಂಘದ ಕಚೇರಿಗೆ ಭೇಟಿ ನೀಡಿದ್ದೆ. ಈತನಕ ಮೋದಿ ಬಂದಿಲ್ಲ ಎಂದು ಅಲ್ಲಿಯವರು ಹೇಳಿದಾಗ ಏಕೆ ಎಂಬ ಪ್ರಶ್ನೆ ಮೂಡಿತ್ತು. ಈಗ ಸಮಾಧಾನವೆನಿಸುತ್ತಿದೆ ಎಂದಿದ್ದಾರೆ. ಮೋದಿ ತಮ್ಮ ಸಾಮಾಜಿಕ ಜೀವನವನ್ನು ಆರಂಭಿಸಿದ್ದೇ ಸ್ವಯಂಸೇವಕನಾಗಿ. ಅವರ ಈ ಭೇಟಿ ಯುವಕರಿಗೆ, ಸ್ವಯಂಸೇವಕರಿಗೆ ಸ್ಫೂರ್ತಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

