ಕುಂದಾಪುರ : ಕುಂದಾಪುರದ ಪ್ರತಿಷ್ಠಿತ ಎಸ್ ಎಸ್ ಶೆಟ್ಟಿ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ಶ್ರೀ ಸನ್ನಿಧಿ ಟ್ರಾವೆಲ್ಸ್ ಮಾರ್ಚ್ 02 ರಂದು ಶುಭಾರಂಭಗೊಳ್ಳಲಿದೆ
ಶ್ರೀ ಸತೀಶ್ ಶೆಟ್ಟಿ ಹಾಗೂ ಶ್ರೀ ಸನ್ನಿಧಿ ಎಸ್ ಶೆಟ್ಟಿಯವರ ಮಾಲಕತ್ವದ ಶ್ರೀ ಸನ್ನಿಧಿ ಟ್ರಾವೆಲ್ಸ್‌ನ ಬಸ್ಸುಗಳು ಕುಂದಾಪುರ ಬೈಂದೂರು ಹಾಗೂ ಕೊಲ್ಲೂರಿನಿಂದ ಬೆಂಗಳೂರಿಗೆ ಮಾರ್ಚ್ 02ರಂದು ಪ್ರಯಾಣಿಸಲಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಅಂತರಾಜ್ಯಗಳಿಗೂ ನಮ್ಮ ಬಸ್ ಸಂಚರಿಸಲಿದೆ ಎಂದು ಅವರು ತಿಳಿಸಿದ್ದಾರೆ

ವಿಶೇಷ ಸೌಲಭ್ಯ
ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಆಧುನಿಕ ಸೌಲಭ್ಯಗಳೊಂದಿಗೆ ವಿಶೇಷವಾಗಿ ವಿನ್ಯಾಸಪಡಿಸಿ ಮೂತ್ರಾಲಯದೊಂದಿಗೆ ಶೌಚಾಲಯವನ್ನು ಒಳಗೊಂಡಿರುವುದು ಇದರ ವಿಶೇಷವಾಗಿದ್ದು ಇದು ರಾಜಯದಲ್ಲೇ ಪ್ರಥಮ ಎನ್ನಲಾಗಿದೆ
ಶ್ರೀ ಸನ್ನಿಧಿ ಟ್ರಾವೆಲ್ಸ್ ಇದರ ಆಪ್‌ನ್ನು ಬಳಸಿ ಶೇಕಡ 15 ರಿಯಾಯಿತಿ ಪಡೆಯಬಹುದಾಗಿದ್ದು ಮುಂದಿನ ದಿನಗಳಲ್ಲಿ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ನಮ್ಮ ಬಸ್ಸಿನಲ್ಲಿ ಸಿಗಲಿದೆ ಎಂದು ಸಂಸ್ಥೆಯ ಪಾಲುದಾರರಾದ ಶ್ರೀ ಸತೀಶ್ ಶೆಟ್ಟಿ ಹಾಗೂ ಸನ್ನಿಧಿ ಎಸ್ ಶೆಟ್ಟಿಯವರು ತಿಳಿಸಿದ್ದಾರೆ

