153
ನವದೆಹಲಿ : ತ್ರಿಭಾಷಾ ಸೂತ್ರ ಕಾನೂನು ಅಳವಡಿಕೆ ಬಗ್ಗೆ ಪರ-ವಿರೋಧದ ಬಗ್ಗೆ ಚರ್ಚೆ ನಡುವೆಯೇ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಇ ದನ್ನು ಬೆಂಬಲಿಸಿದ್ದು, ‘ಒಬ್ಬರು ಹಲವು ಭಾಷೆಗಳನ್ನು ಕಲಿಯಬೇಕು’ ಎಂದಿದ್ದಾರೆ.
ಬುಧವಾರ ಸಂಸತ್ತಿನ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಸುಧಾ ಮೂರ್ತಿ ಒಬ್ಬರು ಬಹು ಭಾಷೆಗಳನ್ನು ಕಲಿಯಬೇಕು ಎಂಬುದು ನನ್ನ ನಿಲುವು ನನಗೂ 7-8 ಭಾಷೆಗಳು ಗೊತ್ತು. ನಾನು ಕಲಿಯುವುದನ್ನು ಖುಷಿ ಪಡು ತೇನೆ. ತ್ರಿಭಾಷಾ ಸೂತ್ರದಿಂದ ವಿದ್ಯಾರ್ಥಿಗಳು ಕೂಡ ಸಾಕಷ್ಟು ಕಲಿಯಬಹುದು ಎಂದರು.

