107
ಮಂಗಳೂರು : ಮೇ 01ರಂದು ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ವಿದೇಶದಿಂದ ಹಣ ಹರಿದು ಬಂದಿರುವ ಶಂಕೆ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹತ್ಯೆ ಹಿಂದೆ ಹಲವಾರು ಕಾಣದ ಕೈಗಳ ಕೈವಾಡವಿರುವ ಶಂಕ್ಕೆ ಹೆಚ್ಚಾಗಿದೆ. ಪೊಲೀಸರು ಅನೇಕ ಬ್ಯಾಂಕ್ ಖಾತೆಗಳ ಪರಿಶೀಲನೆ ಆರಂಭಿಸಿದ್ದಾರೆ. 5 ಲಕ್ಷ ರು.ಗೆ ಹತ್ಯೆ ಮಾಡಲಾಯಿತಾ ? ವಿದೇಶದಿಂದ ಹಣ ಬಂದಿದೆಯಾ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಹಾಸ್ ಮುಗಿಸಲೇಬೇಕು ಎಂದು ನಿರ್ಧರಿಸಿದ್ದ ಆರೋಪಿ ಸಫಾನ್, ನೆರವು ನೀಡುವಂತೆ ಅನೇಕರನ್ನು ಸಂಪರ್ಕಿಸಿದ್ದ. ಈ ನಿಟ್ಟಿನಲ್ಲಿ ಮುಜಾಮಿಲ್ ಮೂಲಕ ವಿದೇಶದಲ್ಲಿರುವ ಹಲವರಿಂದ ಹಣಕಾಸು ನೆರವು ಪಡೆದಿರುವ ಶಂಕೆ ಕೂಡ ವ್ಯಕ್ತವಾಗುತ್ತಿದೆ. ಸಂಭಾವ್ಯ ಜೈಲ್ – ಬೇಲ್ ನೆರವಿಗಾಗಿ ಸಫಾನ್ ಅನೇಕರ ಮುಂದೆ ಕೈಚಾಚಿದ್ದ ಹತ್ಯೆಯಾದ ಕೂಡಲೇ ಸರೆಂಡರ್ ಆಗುವ ಬಗ್ಗೆಯೂ ಈ ಹಂತಕರ ತಂಡ ಚರ್ಚೆ ನಡೆಸಿತ್ತು ಎಂದು ಹೇಳಲಾಗಿದೆ.

