ಬೆಂಗಳೂರು : ತಾವು ಪ್ರತಿನಿಧಿಸುತ್ತಿದ್ದ ಮಂಡ್ಯ ಲೋಕಸಭಾಕ್ಷೇತ್ರ ಬಿಟ್ಟುಕೊಟ್ಟಿದ್ದ ಬಿಜೆಪಿಯ ಸುಮಲತಾ ಅಂಬರೀಶ್ ಅವರಿಗೆ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ ಭಾನುವಾರ 3 ಸ್ಥಾನಗಳಿಗೆ ಬಿಜೆಪಿಯು ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದು, ಸುಮಲತಾಗೆ ಟಿಕೆಟ್ ನೀಡಿಲ್ಲ, ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟಿದ್ದರಿಂದಾಗಿ ಸುಮಲತಾ ಅವರಿಗೆ ಸಹಜವಾಗಿಯೇ ವಿಧಾನಪರಿಷತ್ತಿಗೆ ಪ್ರವೇಶ ನೀಡಬಹುದು ಎಂಬ ಚರ್ಚೆ ಬಿಜೆಪಿ ಪಾಳೆಯದಲ್ಲಿ ನಡೆದಿತ್ತು. ಇದೀಗ ಟಿಕೆಟ್ ಸಿಗದೇ ಇದ್ದುದರಿಂದ ಸುಮಲತಾ ಅವರಿಗೆ ಮುಂದೆ ಯಾವ “ಸ್ಥಾನಮಾನ ಸಿಗಬಹುದು ಎಂಬ ಕುತೂಹಲ ಮೂಡಿದೆ