ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ತಮ್ಮ ಮೇಲೆ ಕೈಗೊಂಡಿದ್ದ ಅಮಾನತು ಕ್ರಮ ರದ್ದುಗೊಂಡ ಬೆನ್ನಲ್ಲೇ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ’ (ಎಡಿಜಿಪಿ) ಬಿ. ದಯಾ ನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳಿಗೆ ಶುಕ್ರವಾರ ರಾಜ್ಯ ಸರ್ಕಾರ ಹುದ್ದೆ ನೀಡಿದೆ.
ಬಂದೀಖಾನೆ ಮತ್ತು ಸುಧಾರಣಾ ಸೇವಾ ಇಲಾಖೆ ಮುಖ್ಯಸ್ಥರಾಗಿ ದಯಾನಂದ್ ನೇಮಕಗೊಂಡಿದ್ದಾರೆ. ಆದರೆ ಸೇವಾ ಹಿರಿತನ ಆಧಾರದ ಮೇರೆಗೆ ಮುಂಬಡ್ತಿ ನಿರೀಕ್ಷೆಯಲ್ಲಿದ್ದ ಅವರಿಗೆ ತುಸು ನಿರಾಸೆಯಾಗಿದೆ.
ಅವರ ಮುಂಬಡ್ತಿಯನ್ನು ಸರ್ಕಾರ ತಡೆ ಹಿಡಿದಿದೆ. ಹೀಗಾಗಿ ಕಾರಾಗೃಹ ಮುಖ್ಯಸ್ಥ ಹುದ್ದೆಯನ್ನು ಡಿಜಿಪಿಯಿಂದ ಎಡಿಜಿಪಿ ಹುದ್ದೆಗೆ ಕೆಳಗಿಳಿಸಿ ದಯಾನಂದ್ ಅವರಿಗೆ ನೀಡಲಾಗಿದೆ..
ಕಾರಾಗೃಹ ಇಲಾಖೆ ಮುಖ್ಯಸ್ಥರಾಗಿದ್ದ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಶುಕ್ರವಾರ ನಿವೃತ್ತರಾದರು. ಅವರಿಂದ ತೆರವಾದ ಸ್ಥಾನವನ್ನು ದಯಾನಂದ್ ಅವರಿಗೆ ನೀಡಲಾಗಿದೆ. ಇನ್ನು ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ಐಜಿಪಿ ವಿಕಾಸ್ ಕುಮಾರ್‌ವಿಕಾಸ್ ಹಾಗೂ ಗುಪ್ತದಳ , ಎಸ್ಪಿಯಾಗಿ ಶೇಖರ್ ತೆಕ್ಕಣ್ಣನವರ್ ಅವರನ್ನು ಸರ್ಕಾರ ನೇಮಿಸಿದೆ.

