Home » ಐಪಿಎಸ್‌ ವಿಕಾಸ್‌ ಅಮಾನತು ಆದೇಶ ರದ್ದು
 

ಐಪಿಎಸ್‌ ವಿಕಾಸ್‌ ಅಮಾನತು ಆದೇಶ ರದ್ದು

ಸಿಎಟಿಯಿಂದ ಮಹತ್ವದ ಆದೇಶ

by Kundapur Xpress
Spread the love

ಬೆಂಗಳೂರು : ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗಿದ್ದ ಕಾಲ್ತುಳಿತ ಪ್ರಕರಣ ಸಂಬಂಧ ಬೆಂಗಳೂರು ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕರಾಗಿದ್ದ ವಿಕಾಸ್ ಕುಮಾರ್‌‌ ವಿಕಾಸ್ ಅವರನ್ನು  ಅಮಾನತುಗೊಳಿಸಿ  ರಾಜ್ಯ ಸರ್ಕಾರ ಜೂ.5ರಂದು ಹೊರಡಿಸಿದ ಆದೇಶವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ರದ್ದುಪಡಿಸಿದೆ

ಅಲ್ಲದೆ ವಿಕಾಸ್ ಕುಮಾರ್‌ ವಿಕಾಸ್ ಅವರನ್ನು ಸೇವೆಗೆ ಮರು ನೇಮಕ ಮಾಡಬೇಕು. ಅಮಾನತು ಅವಧಿಯನ್ನು ಕರ್ತವ್ಯವೆಂದು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಇದೇ ಪ್ರಕರಣ ಸಂಬಂಧ ಸೇವೆಯಿಂದ ಅಮಾನತುಗೊಂಡಿರುವ ಇತರೆ ಹಿರಿಯ ಐಪಿಎಸ್ ಮತ್ತು ಇತರೆ ಪೊಲೀಸರಿಗೂ ಈ ರಾಜ್ಯ ಸರ್ಕಾರ ಈ ಆದೇಶದ ಪ್ರಯೋಜನ ನೀಡಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಪೀಠ ತಿಳಿಸಿದೆ.

 

Related Articles

error: Content is protected !!