ಬೆಳಗಾವಿ : ರಾಜ್ಯದಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿರುವ ವಕ್ಸ್ ಆಸ್ತಿ ವಿವಾದ ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷದವರ ನಡುವೆ ತೀವ್ರ ವಾಗ್ವಾದ, ರಾಜೀನಾಮೆ ಸವಾಲು-ಪ್ರತಿಸವಾಲಿಗೆ ಕಾರಣವಾಗಿ ಅಂತಿಮವಾಗಿ ಪ್ರಶೋತ್ತರ ನಂತರದ ಅವಧಿಯ ಕಲಾಪವನ್ನೇ ಬಲಿ ಪಡೆಯಿತು
ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ವಕ್ಸ್ ಕುರಿತು ನಿಲುವಳಿ ಮಂಡನೆಗೆ ಆಗ್ರಹಿಸಿ ದರು. ಇದಕ್ಕೆ ಸಭಾಪತಿ ಅವರು ನಿಲುವಳಿಯನ್ನು ನಿಯಮ 68ಕ್ಕೆ ಬದಲಾಯಿಸಿ. ಮಧ್ಯಾಹ್ನದ ನಂತರ ಚರ್ಚೆಗೆ ಅವಕಾಶ ನೀಡಿದರು. ಆದರೆ, ಚರ್ಚೆಯು ಗದ್ದಲದ ಸ್ವರೂಪ ಪಡೆದು ಮೊದಲ ದಿನದ ಕಲಾಪ ಬಲಿಯಾಯಿತು