ಬೆಂಗಳೂರು : ಹಗರಣಗಳ ಭರಾಟೆ ನಡುವೆ ಸೋಮವಾರದಿಂದ ವಿಧಾನಮಂಡಲದ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗಲಿದೆ.
ಕಳೆದ ಹಲವು ದಿನಗಳಿಂದ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿ ಪಕ್ಷಗಳಾದ ಬಿಜೆಪಿ- ಜೆಡಿಎಸ್ ಮುಖಂಡರ ನಡುವೆ ವಿವಿಧ ಹಗರಣ ಗಳ ಸಂಬಂಧ ಬಹಿರಂಗವಾಗಿ ಆರೋಪ-ಪ್ರತ್ಯಾ ರೋಪಗಳು ಕೇಳಿಬರುತ್ತಿದ್ದು, ಸೋಮವಾರದಿಂದ ಕಲಾಪದಲ್ಲಿ ಮುಖಾಮುಖಿಯಾಗಲಿದ್ದಾರೆ
ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದು. ಆದರೆ ಈ ಅವಧಿಯಲ್ಲಿ ಹಲವು ಹಗರಣಗಳು ಹೊರ ಬಂದಿದ್ದರಿಂದ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.