ಕುಂದಾಪುರ : ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಳಹಳ್ಳಿಯಲ್ಲಿ ನಡೆಯುತ್ತಿರುವ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಜನಜಾಗೃತಿ ಕಾರ್ಯಕ್ರಮದ ಭಾಗವಾಗಿ ಮೊಳಹಳ್ಳಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಶಿಬಿರಾರ್ಥಿಗಳಿಂದ “ಪರಿಸರ ನಮಗೊಂದಿಷ್ಟು ಉಳಿಸಿ” ಎನ್ನುವ ಬೀದಿ ನಾಟಕ ಪ್ರದರ್ಶನ ಮೊಳಹಳ್ಳಿ ಗ್ರಾಮ ಪಂಚಾಯತ್ ಕಚೇರಿ ಆವರಣ ಹಾಗೂ ಮಾಸ್ತಿಕಟ್ಟೆಯಲ್ಲಿ ನಡೆಯಿತು. ಈ ನಾಟಕವನ್ನು ವಿದ್ಯಾರ್ಥಿ ದೇವಿ ಪ್ರಸಾದ್ ಶೆಟ್ಟಿ ರಚಿಸಿ, ಲಕ್ಷ್ಮಿಕಾಂತ್ ಯು. ಶೆಟ್ಟಿ ನಿರ್ದೇಶಿಸಿದ್ದರು.
ಈ ಸಂದರ್ಭ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾವನಾ, ಉದ್ಯಮಿ ಮಧುಕರ ಮಣಿಯಾಡಿ, ಪ್ರದೀಪ್ ಶೆಟ್ಟಿ ಮೊಳಹಳ್ಳಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಪ್ರಾಧ್ಯಾಪಕರಾದ ಪ್ರವೀಣ್ ಮೊಗವೀರ್ ಗಂಗೊಳ್ಳಿ, ಸತೀಶ್ ಶೆಟ್ಟಿ ಹೆಸ್ಕತ್ತೂರು, ಮಹೇಶ್ ನಾಯ್ಕ್, ರವೀನಾ ಸಿ. ಪೂಜಾರಿ, ವಿನಯಾ ವಿ. ಶೆಟ್ಟಿ, ಪ್ಲೇಸ್ಮೆಂಟ್ ಆಫೀಸರ್ ಹರೀಶ್ ಕಾಂಚನ್, ಕಾಲೇಜಿನ ಪ್ರಯೋಗಶಾಲಾ ಸಿಬ್ಬಂದಿಗಳಾದ ರಕ್ಷಿತ್, ರಾಘವೇಂದ್ರ ಬಾರ್ಕೂರು, ಕಛೇರಿ ಸಿಬ್ಬಂದಿ ರಾಮಕೃಷ್ಣ ಕಾಂತು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಶಿಬಿರಾಧಿಕಾರಿಗಳಾದ ಡಾ| ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು