Home » ಕುಂದಾಪುರ – ಭೀಕರ ಅಪಘಾತ
 

ಕುಂದಾಪುರ – ಭೀಕರ ಅಪಘಾತ

ಮಹಿಳೆ ಮೃತ್ಯು : ಇಬ್ಬರು ಮಣಿಪಾಲಕ್ಕೆ

by Kundapur Xpress
Spread the love

ಕುಂದಾಪುರ : ಇಂದು ಮಧ್ಯಾಹ್ನ 1.30ರ ಗಂಟೆಯ ಸುಮಾರಿಗೆ ಶಾಸ್ತ್ರೀಪಾರ್ಕ್‌ ಪ್ಲೈ ಓವರ್‌ ಮೇಲಿಂದ ಚಲಿಸುತ್ತಿದ್ದ ಇನ್ನೋವಾ ಕಾರೊಂದು ನೆಹರು ಮೈದಾನ ಬಳಿಯ ಬೊಬ್ಬರ್ಯನ ಕಟ್ಟೆ ದೇವಸ್ಥಾನದ ನೇರ ಎದುರುಗಡೆಯಲ್ಲಿ ಕಬ್ಬಿಣದ ತಡೆಬೇಲಿಗೆ ಢಿಕ್ಕಿ ಹೊಡೆದು ಸರ್ವೀಸ್‌ ರಸ್ತೆಗೆ ತಲೆಕೆಳಗಾಗಿ ಮಗುಚಿ ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ಸಾಗಿಸಲಾಗಿದೆ

ಪಾಂಡಿಚೇರಿ ಮೂಲದ ನೋಂದಣಿ ಹೊಂದಿರುವ ಇನ್ನೋವಾ ಕಾರನ್ನು ಮಹಿಳೆಯೊಬ್ಬರು ಚಲಾಯಿಸುತ್ತಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ನಿಧನ ಹೊಂದಿದರು ಎಂದು ವೈದ್ಯರು ತಿಳಿಸಿದ್ದಾರೆ ಇನ್ನೋವಾ ಕಾರಿನಲ್ಲಿ ಮುಸ್ಲಿಂ ಕುಟುಂಬದ ಮೂವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ

   

Related Articles

error: Content is protected !!