Home » ಸವಿ ನೆನಪಿನಂಗಳದಲ್ಲಿ ವಾಣಿ ಜಯರಾಂ
 

ಸವಿ ನೆನಪಿನಂಗಳದಲ್ಲಿ ವಾಣಿ ಜಯರಾಂ

by Kundapur Xpress
Spread the love

ಸವಿ ನೆನಪಿನಂಗಳದಲ್ಲಿ ವಾಣಿ ಜಯರಾಂ

ಸಂಗೀತ ಲೋಕದ ಮಿನುಗು ನಕ್ಷತ್ರವೊಂದು ಇತ್ತೀಚಿಗೆ ಮರೆಯಾಗಿರುವುದು ಸಂಗೀತಾಸಕ್ತರಲ್ಲಿ ಅತೀವ ದು;ಖದ ಛಾಯೆ ಆವರಿಸಿದೆ ಸಂಗೀತ ಲೋಕದಿಂದ ಮರೆಯಾದರೂ ಸಂಗೀತಾಭಿಮಾನಿಗಳ ಮನದಲ್ಲಿ ಮರೆಯಾಗದೇ ನೆಲೆ ನಿಂತಿರುವವರೇ ವಾಣಿ‌ ಜಯರಾಂ ಅವರು 2023 ಫೆ 04 ರಂದು ಸ್ವರ್ಗಸ್ಥರಾದರು

8 ವರ್ಷದ ಹಿಂದೆ ಮೊತ್ತ ಮೊದಲ ಬಾರಿಗೆ ಕುಂದಾಪುರಕ್ಕೆ ಆಗಮಿಸಿದ್ದ ಅವರು ತಮ್ಮ ಸುಮಧುರ ಕಂಠದಿಂದ ಇಲ್ಲಿನ ಅಭಿಮಾನಿಗಳ ಹೃದಯದಲ್ಲಿ ಭದ್ರವಾಗಿ ನೆಲೆಯೂರಿದ್ದರು. ಇಲ್ಲಿ ಕೆಲದಿನ ಕಳೆದು ಕುಂದಾಪ್ರ ಜನರ ಆತ್ಮೀಯತೆ, ಪ್ರೀತಿ ವಾತ್ಸಲ್ಯಕ್ಕೆ ಬೆರಗಾಗಿದ್ದರು. ಕುಂದಾಪ್ರ ಭಾಷೆ ಸಂಸ್ಕತಿ ನೆಲ, ಜಲ, ಇಲ್ಲಿನ ಸ್ಥಳಗಳು ಅತ್ಯಾಪರೂಪ ಎಂದು ಅವರು ಬಣ್ಣಿಸಿದ್ದರು. ಅವರ ಅಗಲುವಿಕೆಯು ಸಾವಿರಾರು ಸಂಗೀತ ಪ್ರೇಮಿಗಳಲ್ಲಿ ಸೂತಕದ ಛಾಯೆ ಆವರಿಸಿದೆ.

2016ರಲ್ಲಿ ವಾಣಿಯರಾಂ ಇಲ್ಲಿನ ಸಂಗೀತ ಪ್ರೇಮಿಗಳು ಅಂಕದಕಟ್ಟೆಯ ಸಹನಾ ಅರ್ಕೆಡ್‍ನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೇರು ಗಾಯಕಿ ಕಾರ್ಯಕ್ರಮಕ್ಕೆ ಒಪ್ಪಿಕೊಂಡು ಆಗಮಿಸಿದ್ದು ಅಸಂಖ್ಯ ಸಂಗೀತ ಪ್ರೇಮಿಗಳ ಹೃದಯ ಅರಳಿತ್ತು. ಹಿಂದೂಸ್ತಾನಿ, ಕರ್ನಾಟಕ ಸಂಗೀತದಲ್ಲಿ ಪ್ರೌಢಿಮೆ ಸಾಧಿಸಿದ್ದ ಇವರು ತನ್ನ ಸರಳತೆ, ಭಾವುಕ ಗುಣಗಳಿಂದ ಇತರರಿಗೂ ಹತ್ತಿರವಾಗಿದ್ದರು. ಕೊಲ್ಲೂರು ಮೂಕಾಂಬಿಕ ದೇವಳದ ದರ್ಶನ ಪಡೆದು ಇಲ್ಲಿನ ಗಾಯಕ ಡಾ. ಸತೀಶ್ ಪೂಜಾರಿ ಯವರು ಮಾನಸಿಕ ಅಸ್ವಸ್ಥರಿಗಾಗಿ ನಡೆಸುತ್ತಿರುವ ಪರಿವರ್ತನ ಕೇಂದ್ರಕ್ಕೆ ಭೇಟಿ ನೀಡಿ ಬೆರಗುಗೊಂಡು ಅಲ್ಲಿಯೇ ಒಂದು ಹಾಡು ಹಾಡಿ ಅಸ್ವಸ್ಥರ  ಮನಸ್ಸಿಗೆ ಸಾಂತ್ವನ ತುಂಬಿದರು.

ಮಗುವಿನ ಮನಸ್ಸಿನ ಸಾಂಪ್ರದಾಯಿಕ ಬದುಕಿನ ವಾಣಿಯರಾಂ ಅಗಲುವಿಕೆ ಅಪಾರ ದುಃಖ ತಂದಿದೆ. ಸದಾ ಒಂಟಿತನ ಬಯಸುತ್ತಿದ್ದ ಅಮ್ಮ ಯಾರು ಜತೆಗಿಲ್ಲದೆ ಒಬ್ಬಂಟಿಯಾಗಿ ಇಹಲೋಕ ತ್ಯಜಿಸಿರುವುದು ಅರಗಿಸಲಾರದ ನೋವು ಎಂದು ಕುಂದಾಪುರದ ವಾಣಿಜಯರಾಂರವರ ಅಭಿಮಾನಿಯಾದ ಡಾ. ಸತೀಶ್ ಪೂಜಾರಿಯವರ ಮನದಾಳದ ಮಾತು

ಬಹುದೊಡ್ಡಭಾಗ್ಯ: ನಾನೊಬ್ಬ ಚಿಗುರುತ್ತಿರುವ ಗಾಯಕ. ವಾಣಿಜಯರಾಂ ಅವರ ಬಹುದೊಡ್ಡ ಅಭಿಮಾನಿ. ಒಬ್ಬ ಹವ್ಯಾಸಿ ಗಾಯಕನಾಗಿ ಅವರ ವಿಶ್ವಾಸಕ್ಕೆ ಪಾತ್ರನಾಗಿದ್ದು ಜೀವನದ ಬಹುದೊಡ್ಡ ಭಾಗ್ಯ. 2018 ರಲ್ಲಿ ಅವರ ಪತಿ ನಿಧನರಾದ ಬಳಿಕ ಬಹುವಾಗಿ ಒಂಟಿಯಾಗಿದ್ದರು. ನಾನು ಫೋನ್ ಮೂಲಕ ಮಾತನಾಡಿ ಧೈರ್ಯ ತುಂಬುತ್ತಿದೆ. 2016ರಲ್ಲಿ ಅವರು ಕುಂದಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅವರು ಒಪ್ಪಿಕೊಂಡಾಗ ಸ್ವರ್ಗವೇ ಧರೆಗಿಳಿದಂತಾಗಿತ್ತು. ವಿಮಾನ ನಿಲ್ದಾಣಕ್ಕೆ  ಅವರನ್ನು ಆಹ್ವಾನಿಸಲು ಹೋದಾಗ ನನ್ನನ್ನು ಕಂಡು ನೀನೇಕೆ ಸಿನಿಮಾ ನಟನಾಗಬಾರದು ಎಂದಿದ್ದರು. ಕುಂದಾಪುರದ ಸಂಗೀತ ಕಾರ್ಯಕ್ರಮದಲ್ಲಿ ಅವರೊಂದಿಗೆ ನಾನು “ ನಾ ನಿನ್ನ ಮರೆಯಲಾರೆ ” ಹಾಡನ್ನು ಹಾಡಿರುವುದು ಪೂರ್ವಜನ್ಮದ ಪುಣ್ಯ  ಹಾಡಿನ ಬಳಿಕ ಚೆನ್ನಾಗಿ ಹಾಡಿದ್ದೀಯಾ ಎಂದು ಹೇಳಿದಾಗ ದೊಡ್ಡ ಪ್ರಶಸ್ತಿ ನೀಡಿದ್ದಷ್ಟು ಸಂತಸಗೊಂಡಿದ್ದೆ. ಸೌಮ್ಯ, ಸರಳತೆ ಮತ್ತು ಭಾವುಕತೆ ಅವರ ಆಸ್ತಿಯಾಗಿತ್ತು. ಸಂಗೀತಕ್ಕಾಗಿ ಜೀವನ ಸಮರ್ಪಿಸಿಕೊಂಡ ಮೆರು ಗಾಯಕಿ ವಾಣಿಯರಾಂ ಅವರೊಂದಿಗೆ ಬಾಂಧವ್ಯ ಅಸದೃಶ್ಯ. ಅವರನ್ನು  ಕಳೆದುಕೊಂಡ ನೋವು ಇನ್ನೂ ಕಾಡುತ್ತಿದೆ. ಕುಂದಾಪುರದ ನೆಲವನ್ನು ಅತೀವವಾಗಿ ಪ್ರೀತಿಸುತ್ತಿದ್ದ ಜೀವವೊಂದನ್ನು ಕಳೆದುಕೊಂಡಿದ್ದೇವೆ ಎಂದು ಗಾಯಕರಾದ ಡಾ. ಸತೀಶ್ ಪೂಜಾರಿಯವರು ತಿಳಿಸಿದ್ದಾರೆ.

   

Related Articles

error: Content is protected !!