Home » ಕುಂದಾಪುರ ಸಾರ್ವಜನಿಕ ನಿಯೋಗದಿಂದ ಡಿ ಎಚ್‌ ಓ ಭೇಟಿ
 

ಕುಂದಾಪುರ ಸಾರ್ವಜನಿಕ ನಿಯೋಗದಿಂದ ಡಿ ಎಚ್‌ ಓ ಭೇಟಿ

by Kundapur Xpress
Spread the love

ಕುಂದಾಪುರ : ಕುಂದಾಪುರ ತಾಲೋಕು ಸರಕಾರಿ ಅಸ್ಪತ್ರೆಯು ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದ್ದು ತಾಲೋಕು ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಕೂಡ ಚಿಕಿತ್ಸೆಗಾಗಿ ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದು ಇಲ್ಲಿನ ಆಡಳಿತಾಧಿಕಾರಿ ರಾಬರ್ಟ್‌ ರೆಬೆಲ್ಲೋ ರವರ ಮಾನಸಿಕ ಮತ್ತು ಲೈಂಗಿಕ ಕಿರುಕುಳ ಘಟನೆಯು ಈ ಆಸ್ಪತ್ರೆಗೆ ಕಪ್ಪುಚುಕ್ಕಿಯಾಗಿದ್ದು ಕುಂದಾಪುರದ ನಾಗರಿಕರು ತಲೆ ತಗ್ಗಿಸುವಂತಾಗಿದೆ ಆರೋಪಿ ರಾಬರ್ಟ್‌ ರೆಬೆಲ್ಲೋ ನಾಪತ್ತೆಯಾಗಿದ್ದು ಪ್ರಕರಣದ ಸತ್ಯಾಸತ್ಯತೆಯನ್ನು ಮರೆಮಾಚದೇ ಇಲಾಖಾ ವತಿಯಿಂದ ತನಿಖೆ ನಡೆಸಿ ಅವರ ಅಮಾನಾತಿಗೆ ಶಿಪಾರಾಸು ಮಾಡಿ ಮೇಲಾಧಿಕಾರಿಗಳಿಗೆ ವಿಸ್ತ್ರತ ವರದಿಯನ್ನು ನೀಡಬೇಕೆಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಈಶ್ವರ್‌ ಗಢಾದ್‌ರವರಿಗೆ ಮನವಿ ಸಲ್ಲಿಸಲಾಯಿತು 

ಡಿ ಎಚ್‌ ಓ ಈಶ್ವರ್‌ ಗಢಾದ್‌ ಅವರೊಂದಿಗೆ ತಾಲೋಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಲತಾ ಸಹಾಯಕ ಆಡಳಿತಾಧಿಕಾರಿ ಲಿನೋರಾ ಮಸ್ಕೇರನಾಸ್‌ ಕಚೇರಿ ಅಧೀಕ್ಷಕರಾದ ಶಾಲಿ ಉಪಸ್ಥಿತರಿದ್ದರು

ಕುಂದಾಪುರ ಸಾರ್ವಜನಿಕ ನಿಯೋಗದಲ್ಲಿ ರಾಜೇಶ್‌ ಕಾವೇರಿ ಹೇರಿಕುದ್ರು ಸುನಿಲ್ ಶೆಟ್ಟಿ ಬಲ್ಲಾಳ್‌ ಕಿಶೋರ್‌ ಪುರಸಭಾ ಸದಸ್ಯ ಪ್ರಭಾಕರ್‌ ಕೆ ಟಿ ಸತೀಶ್‌ ಶಿವ ಮೆಂಡನ್‌ ಅವಿನಾಶ್‌ ಉಳ್ತೂರು ಮನೋಜ್‌ ರಾಘವೇಂದ್ರ ಮದ್ದುಗುಡ್ಡೆ ಮುಂತಾದವರು ಉಪಸ್ಥಿತರಿದ್ದರು  

   

Related Articles

error: Content is protected !!