ಬೆಂಗಳೂರು : ದಾಂಪತ್ಯ ಶ್ರೇಷ್ಠತೆಯಲ್ಲೂ ಸಮಾನತೆ, ಸಾಹಿತ್ಯ ಸಾಧನೆಯಲ್ಲೂ ಸಮಾನತೆ ಸಾಧಿಸಿದ ಕರ್ನಾಟಕದ ಏಕೈಕ ನಾಡೋಜ ದಂಪತಿಗಳಿದ್ದರೆ ಅದು ‘ಕಮಲಾ-ಹಂಪನಾ’ ಜೋಡಿ ಮಾತ್ರ. ಆದರ್ಶ ದಾಂಪತ್ಯ,ಕರುನಾಡಿನ ಸಾಂಸ್ಕೃತಿಕ ಶ್ರೇಷ್ಠತೆಯ ಪ್ರತೀಕದಂತಿದ್ದ ಇವರಲ್ಲಿ ಕಮಲಾ ಅಮ್ಮನವರು ಇನ್ನಿಲ್ಲದಿರುವ ಕಹಿ ಸತ್ಯದ ನಡುವೆ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸುವ ವೇಳೆ ಅನಾಥ ಪ್ರಜ್ಞೆಯ ಮುಖಭಾವ ಹೊತ್ತ ಪ್ರೊ.ಹಂಪನಾ ಅವರನ್ನು ಸಂತೈಸುವ ಮಾತುಗಳು ಹೊರಬರದೇ ಭಾವುಕತೆ ಆವರಿಸಿತು.
ಮಾತೃ ಸ್ವರೂಪಿಣಿ ಕಮಲಾ ಹಂಪನಾ ಅವರ ಬದುಕು, ಸಾಧನೆ ಕನ್ನಡ ಸಾಹಿತ್ಯ ಲೋಕ ಹಾಗೂ ಸ್ತ್ರೀ ಕುಲದ ಸಮಾಜಕ್ಕೆ ಸರ್ವಕಾಲಿಕ ಮಾದರಿ ಹೆಜ್ಜೆ ಗುರುತುಗಳನ್ನು ಪಡಿಮೂಡಿಸಿದೆ. ಕಮಲಾ ಹಂಪನಾ ಅವರು ತಮ್ಮ ಸಾಧನೆ ಹಾಗೂ ಸಾಹಿತ್ಯದ ಮೂಲಕ ಕರುನಾಡ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದು ವಿಜಯೇಂದ್ರ ಕಂಬನಿ ಮಿಡಿದಿದ್ದಾರೆ