Home » ಲೋಕಸಭೆ ಸಭಾಧ್ಯಕ್ಷರಾಗಿ ಓಂ ಬಿರ್ಲಾ
 

ಲೋಕಸಭೆ ಸಭಾಧ್ಯಕ್ಷರಾಗಿ ಓಂ ಬಿರ್ಲಾ

by Kundapur Xpress
Spread the love

ನವದೆಹಲಿ : ಲೋಕಸಭೆ ಸಭಾಧ್ಯಕ್ಷ ಸ್ಥಾನಕ್ಕೆ 48 ವರ್ಷ ಬಳಿಕ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕೊನೇ ಕ್ಷಣದ ಅನಿರೀಕ್ಷಿತ ತಿರುವುಗಳ ಪರಿಣಾಮ ಎನ್‌ಡಿಎ ನಾಮ ನಿರ್ದೇಶಿತ ಅಭ್ಯರ್ಥಿ ಓಂ ಬಿರ್ಲಾ ಅವರು ಲೋಕಸಭೆಯ ಸೀಕರ್‌ ಆಗಿ ಬುಧವಾರ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡುವ ನಿರ್ಣಯ ಮಂಡಿಸಿದರು. ಆದರೆ ಕಾಂಗ್ರೆಸ್ ಸದಸ್ಯ ಕೋಡಿಕುನ್ನಿಲ್ ಸುರೇಶ್ ಅವರ ಹೆಸರನ್ನು ಅಭ್ಯರ್ಥಿಯನ್ನಾಗಿ ಮುಂದಿಟ್ಟಿದ್ದ ಇಂಡಿಯಾ ಕೂಟದ ಪ್ರತಿಪಕ್ಷಗಳು, ಸದನಕ್ಕೆ ಮತ ಹಾಕಲು ಒತ್ತಾಯಿಸಲಿಲ್ಲ.

ಹೀಗಾಗಿ ಧ್ವನಿಮತದಿಂದ ಓಂ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆ ಆಗಿದ್ದಾರೆ ಎಂದು ಹಂಗಾಮಿ ಸ್ಪೀಕರ್ ಭರ್ತೃಹರಿ ಮಹಬ್ ಘೋಷಣೆ ಮಾಡಿದರು.ಇದರೊಂದಿಗೆ, ರಾಜಸ್ಥಾನದ ಕೋಟಾ ಕ್ಷೇತ್ರದ ಬಿಜೆಪಿ ಸಂಸದ ಬಿರ್ಲಾ ಅವರು ಸತತ ಎರಡನೇ ಬಾರಿಗೆ ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಂಡಂ ತಾಗಿದೆ. ಅಲ್ಲದೆ, 2ನೇ ಬಾರಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿರುವ 5ನೇ ವ್ಯಕ್ತಿ ಆಗಿ ಬಿರ್ಲಾ ಹೊರಹೊಮ್ಮಿದ್ದಾರೆ.

   

Related Articles

error: Content is protected !!