ಬೆಂಗಳೂರು : ಮೂಡಾ ಹಗರಣವನ್ನು ಬೇರೆಯವರು ಮಾಡಿದ್ದರೆ ಮುಖ್ಯಮಂತ್ರಿ ಸಮರ್ಥನೆ ಮಾಡಿಕೊಳ್ಳುತ್ತಿರಲಿಲ್ಲ ಒಂದು ಕ್ಷಣವೂ ಅವರನ್ನು ಕುರ್ಚಿಯಲ್ಲಿ ಕೂರಿಸದೇ ಕೆಳಗೆ ಇಳಿಸುತ್ತಿದ್ದರು. ಈಗ ಅವರೇ ಆರೋಪಿ ಸ್ಥಾನದಲ್ಲಿರುವುದರಿಂದ ಕೂಡಲೇ ರಾಜೀನಾಮೆ ನೀಡಬೇ ಕೆಂದು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಪಿಂಚಣಿ ಹಣ, ಕೂಡಿಟ್ಟ ಹಣ ಸೇರಿಸಿ ಅರ್ಜಿ ಹಾಕಿದವರಿಗೆ ನಿವೇಶನ ಸಿಕ್ಕಿಲ್ಲ. ಆದರೆ ಸಿದ್ದರಾಮಯ್ಯನವರ ಪತ್ನಿ ಹೆಸರಿಗೆ 16 ನಿವೇಶನಗಳು ಇವೆ. ಇದನ್ನು ಗಮನಿಸಿದರೆ ಹಗರಣ ನಡೆದಿರುವುದು ಸಾಬೀತಾಗುತ್ತದೆ. ಇದೇ ರೀತಿ ಮಹಾನಗರ ಪಾಲಿಕೆಯಲ್ಲಿ ನಡೆದಿರಬಹುದಾದ ಹಗರಣಗಳ ಕೂಡ ಸಮಗ್ರ ತನಿಖೆಯಾಗಲಿ ಎಂದು ಒತ್ತಾಯಿಸಿದರು