Home » 24.ಮನಸ್ಸೆಂಬ ಮಿತ್ರ-ಶತ್ರು
 

24.ಮನಸ್ಸೆಂಬ ಮಿತ್ರ-ಶತ್ರು

by Kundapur Xpress
Spread the love

 

  1. ಮನಸ್ಸೆಂಬ ಮಿತ್ರ-ಶತ್ರು

ಮನಸ್ಸು ನಮ್ಮ ಪರಮ ಮಿತ್ರನೂ ಹೌದು. ಪರಮ ಶತ್ರವೂ ಹೌದು ಎನ್ನುವುದಕ್ಕೆ ನಾವು ನಮ್ಮ ಬದುಕಿನಲ್ಲಿ ಅನುಭವಿಸುವ ಸೋಲು-ಗೆಲುವುಗಳು, ಸುಖ-ದುಃಖಗಳು, ನೋವು-ನಿರಾಶೆಗಳೇ ಸಾಕ್ಷಿ. ನಮ್ಮೆಲ್ಲ ನೋವು, ದುಃಖ, ದುಮ್ಮಾನಗಳಿಗೆ ಶೇ.95ರಷ್ಟು ನಾವೇ ಕಾರಣರು. ಇದರಲ್ಲಿ ವಿಧಿಯ ಪಾಲು ಕೇವಲ ಶೇ. 5 ರಷ್ಟು. ನಮ್ಮ ಮನಸ್ಸು ಹೇಗೋ ಹಾಗೆ ನಾವು ಮತ್ತು ನಮ್ಮ ಬದುಕು. ನಮ್ಮ ಮಿತ್ರರು ಮತ್ತು ನಮ್ಮ ಶತ್ರುಗಳು ಕೂಡ! ಮಹಾ ದಾರ್ಶನಿಕ ಸಾಹಿತಿ ಮಿಲ್ಟನ್ ನಮ್ಮ ಮನಸ್ಸಿನ ಕುರಿತಾಗಿ ಹೇಳುವುದು ಹೀಗೆ. ನಮ್ಮ ಮನಸ್ಸು ರಸದಿಂದ ಕಸವನ್ನೂ ಗ್ರಹಿಸಬಹುದು. ನರಕಯಾತನೆಯನ್ನು ಕೊಡಿಸಬಹುದು. ಹಾಗೆಯೇ ಕಸದಿಂದ ರಸವನ್ನೂ ಸೃಜಿಸಿ ಸ್ವರ್ಗಸುಖವನ್ನೂ ನಮಗೆ ಉಣಿಸಬಹುದು. ಆದುದರಿಂದ ಮನಸ್ಸಿನೊಂದಿಗೆ ವ್ಯವಹರಿಸುವಾಗ ಎಚ್ಚರವಿರಬೇಕು. ಕೇವಲ ಹುಡುಗಾಟಿಕೆಯಿಂದ ವ್ಯವಹರಿಸಿದರೆ ಫಲಿತಾಂಶ ಕೂಡ ಬೇಜವಾಬ್ದಾರಿಯದ್ದಾಗಿರುವುದು. ಹಾಗೆಂದು ಜವಾಬ್ದಾರಿಯಿಂದ ವ್ಯವಹಿರಿಸಿದರೆ ಸಿಗುವ ಫಲದಿಂದ ಸಮಷ್ಟಿ ಹಿತವೇ ಉಂಟಾಗುವುದು. ಆದುದರಿಂದಲೇ ಮನಸ್ಸಿಷ್ಟು ಉತ್ತಮನಾದ ಮಿತ್ರ ಬೇರೊಂದಿಲ್ಲ. ಎಂತಹ ಮಹತ್ ಕಾರ್ಯವನ್ನು ಸಾಧಿಸಲು ಈ ಮಿತ್ರನ ಸಂಕಲ್ಪಶಕ್ತಿಯೇ ಬಹು ದೊಡ್ಡ ಶಕ್ತಿ. ವಿಶ್ವ ವಿಖ್ಯಾತ ಪರಾಕ್ರಮಿ ನೆಪೋಲಿಯನ್ ಮನಸ್ಸಿನ ಸಂಕಲ್ಪ ಶಕ್ತಿಯ ಬಗ್ಗೆ ಹೇಳುವುದು ಹೀಗೆ. ಎಷ್ಟೋ ಯುದ್ಧಗಳು ಹೋರಾಟಕ್ಕೆ ಮುನ್ನವೇ ಮನಸ್ಸಿನೊಳಗೆ ಜಯಿಸಲ್ಪಟ್ಟಿರುತ್ತವೆ! ಅದಕ್ಕೆ ಕಾರಣವೇ ಮನಸ್ಸಿನೊಳಗೆ ಹುದುಗಿರುವ ಸಂಕಲ್ಪ ಶಕ್ತಿ.

   

Related Articles

error: Content is protected !!