ಚೆನ್ನೈ : ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೂ ಮುಕ್ತಗೊಳಿಸಿದ ಬಳಿಕ ಚೆನ್ನೈ ಮೂಲದ ಅಂತರಿಕ್ಷ ಸ್ಟಾರ್ಟಪ್ ಕಂಪನಿಯೊಂದು ಹೊಸ ಇತಿಹಾಸ ನಿರ್ಮಿಸಿದೆ. ಲಾರಿಯ ಮೇಲಿಟ್ಟು ದೇಶದ ಮೊದಲ ಮರುಬಳಕೆಯ ಹೈಬ್ರಿಡ್ ರಾಕೆಟ್ ವೊಂದನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ರಾಕೆಟ್ 53 ಉಪಗ್ರಹಗಳನ್ನು ಹೊತ್ತೊ ಯ್ದಿದೆ. ಇವು ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆ ಕುರಿತು ಅಧ್ಯಯನ ನಡೆಸಲಿವೆ
ಚೆನ್ನೈನ ರಮಣೀಯ ಈಸ್ಟ್ ಕೋಸ್ಟ್ ರಸ್ತೆ ಬಳಿಯ ಮೈದಾನವೊಂದರಲ್ಲಿ ಲಾರಿಯ ಮೇಲೆ ಇಟ್ಟು ‘ರೂಮಿ-2024’ ರಾಕೆಟ್ ಉಡಾವಣೆ ಮಾಡಲಾಗಿದೆ. 3.5 ಮೀಟರ್ ಎತ್ತರದ ಈ ರಾಕೆಟ್ ಬೆಳಗ್ಗೆ 7.00ಕ್ಕೆ ಉಡಾವಣೆಯಾಗಬೇಕಿತ್ತು. ಆದರೆ 7.25 ಯಶಸ್ವಿಯಾಗಿ ಉಡಾವಣೆಯಾಗಿದೆ ಎಂದು ಆ ರಾಕೆಟ್ ಅಭಿವೃದ್ಧಿಪಡಿಸಿದ ಸ್ಟಾರ್ಟಪ್ ಕಂಪನಿ ಸ್ಪೇಸ್ ಜೋನ್ ಇಂಡಿಯಾದ ಸಂಸ್ಥಾಪಕ, ಸಿಇಒ ಆನಂದ್ ಮೇಘಲಿಂಗಂ ಅವರು ತಿಳಿಸಿದ್ದಾರೆ