ಕುಂದಾಪುರ : ಕುಂದಾಪುರ ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಸೇವಾ ಸಹಕಾರ ಸಂಘ ಇದರ 2023 – 24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಜರುಗಿತು
ನಗರದ ಮುಖ್ಯ ರಸ್ತೆಯಲ್ಲಿರುವ ಹೊಟೇಲ್ ಪಾರಿಜಾತ ಸಭಾಂಗಣದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಶ್ರೀ ಮಹಾಲಕ್ಷ್ಮಿ ಪ್ರಾಥಮಿಕ ಸೇವಾ ಸಹಕಾರ ಸಂಘ ಸಂಘದ ಅಧ್ಯಕ್ಷರಾದ ಎಚ್.ಶಂಕರ್ ಶೇರುಗಾರ್ ವಹಿಸಿದ್ದರು
ಸಂಘದ ಅಧ್ಯಕ್ಷರಾದ ಎಚ್ ಶಂಕರ್ ಶೇರುಗಾರ್ ಅವರು ಸಂಘದ ಸರ್ವ ಸದಸ್ಯರನ್ನು ಸ್ವಾಗತಿಸಿ ಈ ವರ್ಷದ ವ್ಯವಹಾರದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಕೆ ಪ್ರಕಾಶ್ ಬೆಟ್ಟಿನ್ ವೆಂಕಟೇಶ್ ಸೇರುಗಾರ್ ರಾಜೇಶ್ ಕಾವೇರಿ ಶರತ್ ಕುಮಾರ್ ಚಂದ್ರಶೇಖರ್ ದಯಾನಂದ ಸಂತೋಷ್ ಕುಮಾರ್ ಅರುಣ್ ಕುಮಾರಿ ಪೂರ್ಣಿಮಾ ಭವಾನಿ ಶಂಕರ್ ಜಯಲಕ್ಷ್ಮಿ ಉಮೇಶ್ ಮಧ್ಯಸ್ತ ಭಾಸ್ಕರ್ ಕೆ ವಿ ಉಪಸ್ಥಿತರಿದ್ದರು
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ (ಪ್ರಭಾರ) ನಾಗರಾಜ ನಾಯ್ಕ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಲಿತಾ ನಾಯಕ್ ಪ್ರಾರ್ಥಿಸಿ ಸದಸ್ಯರಾದ ಸತೀಶ್ ಸೇರುಗಾರ್ ಶುಭಾಸಂಶನೆಗೈದರು