ಕೋಟ : ದೇಗುಲ ಸ್ವಚ್ಛತೆಯಿಂದ ಗ್ರಾಮಗಳು ಸುಭಿಕ್ಷೆಗೊಳ್ಳುತ್ತದೆ ಈ ದಿಸೆಯಲ್ಲಿ ಪಂಚವರ್ಣ ಸಂಸ್ಥೆಯ ನಿರಂತರ ಸಾಮಾಜಿಕಕಾರ್ಯ ಶ್ಲಾಘನೀಯ ಎಂದು ಕೋಟದ ಸಹಕಾರಿ ವ್ಯವಸಾಯಕ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ನುಡಿದರು.ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್,ಹಂದಟ್ಟು ಮಹಿಳಾ ಬಳಗ ಕೋಟ,ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ 225ನೇ ಭಾನುವಾರದ ಪರಿಸರಸ್ನೇಹಿ ಆಭಿಯಾನದ ಪ್ರಯುಕ್ತ ನೆಹರು ಯುವ ಕೇಂದ್ರದ ಸ್ವಚ್ಛತಾ ಹೀ ಸೇವಾ ಯೋಜನೆಯಡಿ ಕೋಟತಟ್ಟು ಹಾಡಿ ಶ್ರೀ ವಿಷ್ಣುಮೂರ್ತಿ ದೇಗುಲದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮ ಹಾಗೂ ದೇಗುಲ ಸ್ವಚ್ಛಗೊಳಿಸಿದರೆ ಮನಶುದ್ಧಿಗೊಳ್ಳುದಲ್ಲದೆ ಪ್ರಸ್ತುತ ಹಾಡಿ ವಿಷ್ಣು ದೇಗುಲ ಪುರಾತನ ಹಿನ್ನಲ್ಲೆಯುಳ್ಳದ್ದು ಇದರ ಬಗ್ಗೆ ಪಂಚವರ್ಣ ಸಂಸ್ಥೆ ನಿರಂತರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪರಿಸರದ ಬಗ್ಗೆ ಅವರಿಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ, ಈ ದಿಸೆಯಲ್ಲಿ ಪ್ರತಿಯೊಬ್ಬರು ತಮ್ಮೂರಿನ ಪರಿಸರ ಹಾಗೂ ದೇಗುಲಗಳ ಬಗ್ಗೆ ವಿಶೇಷ ಕಾಳಜಿ ಇರಲಿ ಎಂದು ಹಾರೈಸಿದರು.ಇದೇ ವೇಳೆ ಅಭಿಯಾನದಲ್ಲಿ ಸ್ವಚ್ಛತೆಯ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಭೋದಿಸಿದರು.ಅಲ್ಲದೆ ಕಾರ್ಯಕ್ರಮದ ನಂತರ ಸ್ವಯಂ ಸೇವಕರೆಲ್ಲ ಜೊತೆಗೂಡಿ ಗೋವಿಂದನ ನಾಮ ಕೀರ್ತನೆ ಮೊಳಗಿಸಿದರು.ಮುಖ್ಯ ಅತಿಥಿಗಳಾಗಿ ಸಾಸ್ತಾನದ ಗೋಳಿಬೆಟ್ಟು ಶಾಲಾ ಮುಖ್ಯ ಶಿಕ್ಷಕ ಮಹೇಶ್ ಮೊಗವೀರ,ಹಾಡಿ ವಿಷ್ಣುಮೂರ್ತಿ ದೇಗುಲದ ಮುಖ್ಯಸ್ಥರಾದ ಮಹೇಶ್ ಬಾಯರಿ,ಸುರೇಶ್ ಬಾಯರಿ, ಸುಜಾತ ಬಾಯರಿ , ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್,ಹಂದಟ್ಟು ಮಹಿಳಾ ಬಳಗದ ಸ್ಥಾಪಾಕಾಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಮಣೂರು ಫ್ರೆಂಡ್ಸ್ ನ ದಿನೇಶ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು, ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.