ಕೋಟ : ಭಾರತ ಎಂದಿಗೂ ಹಿಂದು ರಾಷ್ಟ್ರ ಸನ್ನಿವೇಶದಲ್ಲಿ ತಮ್ಮ ಆತ್ಮರಕ್ಷಣೆ, ಭದ್ರತೆಗಾಗಿ ಹಿಂದು ಸಮಾಜ ಜಾತಿ ಮತ ಭಾಷಾ ಭೇದಗಳಿಂದ ಮುಕ್ತರಾಗಿ ಪ್ರಾದೇಶಿಕ ಭಿನ್ನಾಭಿಪ್ರಾಯಗಳ ಮರೆತು ಒಗ್ಗಟ್ಟಾಗುವುದು ತೀರ ಅನಿವಾರ್ಯವೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಸರಸಂಘಚಾಲಕ ಡಾ. ಮೋಹನ್ ಭಾಗ್ವತ್ ಅವರು ಕರೆ ನೀಡಿದ್ದಾರೆ.
ರಾಜಸ್ಥಾನದ ಬರಾನ್‌ನಲ್ಲಿ ಸ್ವಯಂಸೇವಕ ವಿಕತ್ರೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಹಿಂದುಗಳು ಪ್ರತಿಯೊಬ್ಬರಲ್ಲೂ ನಂಬಿಕೆ ಮತ್ತು ಪ್ರತಿಯೊಬ್ಬರನ್ನೂ ಪ್ರೀತ್ಯಾದರಗಳಿಂದ ಒಪ್ಪಿಕೊಳ್ಳುವವರು ಎಂದರು
ಹಿಂದು ಎಂಬ ಪದವು ರೂಢಿಗೆ ಬರುವ ಎಷ್ಟೋ ಸಾವಿರಾರು ವರ್ಷಗಳ ಹಿಂದೆಯೇ ನಾವೆಲ್ಲ ಅಥವಾ ನಮ್ಮ ಹಿರಿಯರೆಲ್ಲರು ಇದೇ ಹಿಂದುಸ್ಥಾನದಲ್ಲಿ ಹುಟ್ಟಿ ಬೆಳೆದವರು. ಹಿಂದುಗಳಿಗೆ ಯಾರನ್ನೂ ವಿರೋಧಿಸುವ ಗುಣವಿಲ್ಲ ಬದಲಾಗಿ ಪ್ರತಿಯೋರ್ವರನ್ನೂ ಪ್ರೀತ್ಯಾದರಗಳಿಂದ ಒಪ್ಪಿಕೊಳ್ಳುವ ಅಪೂರ್ವ ಗುಣಸಂಪನ್ನರು. ಸದಾಕಾಲ ಎಲ್ಲರಲ್ಲೂ ಅನ್ನೋನ್ಯತೆಯಿಂದ ಬಾಳುವವರು ಎಂದು ಭಾಗ್ವತ್ ಹಿಂದುಗಳ ಗುಣಸಂಪನ್ನತೆಯನ್ನು ಕೊಂಡಾಡಿದರು
ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳು ಯಾಂತ್ರಿಕವಲ್ಲ ಬದಲು ಸಿದ್ಧಾಂತ ಆಧಾರಿತವಾದುದು. ಇದೊಂದು ಪರ್ಯಾಯವೇ ಇಲ್ಲದ ಅಪೂರ್ವ ಸಂಘಟನೆ. ಇದರ ಮೌಲ್ಯಗಳು, ಸಿದ್ಧಾಂತಗಳು ಸಂಘದ ಜವಾಬ್ದಾರಿಯುತ ನಾಯಕರ ಮುಖೇನ ಸ್ವಯಂಸೇವಕರಿಗೆ, ಸ್ವಯಂಸೇವಕರಿಂದ ಅವರ ಕುಟುಂಬಗಳಿಗೆ, ತನ್ಮೂಲಕ ಇಡೀ ಸಮಾಜಕ್ಕೆ ತಲಪುವುದು ಎಂದರು