ಕೋಟ: ಅನಾಥ ಗೋವುಗಳಿಗೆ ಮೇವು ಒದಗಿಸುವ ಕಾರ್ಯ ಭಗವಂತನ ಭಕ್ತಿ ಮಾರ್ಗದಲ್ಲೊಂದು ಎಂದು ಪಾರಂಪಳ್ಳಿ ಪ್ರಗತಿಪರ ಕೃಷಿಕ ರವೀಂದ್ರ ಐತಾಳ್ ನುಡಿದರು. ಭಾನುವಾರ ಕೋಟ ವ್ಯಾಪ್ತಿಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಇವರ ಸಾರಥ್ಯದಲ್ಲಿ ಗೋವಿಗಾಗಿ ನಾವು, ಪ್ರಚಾರಕಲ್ಲ ಪ್ರೇರಣೆಗಾಗಿ ಎನ್ನುವ ಅಭಿಯಾನದ 5ನೇ ಸರಣ ಕಾರ್ಯಕ್ರಮ ಪಾರಂಪಳ್ಳಿ ಪ್ರಗತಿಪರ ಕೃಷಿಕ ರವೀಂದ್ರ ಐತಾಳ್ ಅವರ ಮನೆಯ ವಠಾರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ ಗೋ ಮಾತೆಯ ಸೇವೆ ಶ್ರೇಷ್ಠವಾದ ಮಾರ್ಗ ಇಂತಹ ಕಾಯಕ ನಿರಂತವಾಗಿ ನಡೆಯಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಉದ್ಯಮಿ ವಿಜಯ ಶೆಟ್ಟಿ ಆವರ್ಸೆ ಅವರ ಸಹಕಾರದೊಂದಿಗೆ ಆವರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಆವರ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ್ ಗಾಣಿಗ ,ಶಂಕರ್ ಪೂಜಾರಿ, ಆವರ್ಸೆ ಗುತ್ತಿಗೆದಾರ ಚಂದ್ರ ಪೂಜಾರಿ ಆವರ್ಸೆ, ಹೆರಿಯ ಕುಲಾಲ್ ಆವರ್ಸೆ, ಶಿವರಾಮ ನಾಯ್ಕ್ ಕಿರಾಡಿ, ಹಾಗೂ ಆವರ್ಸೆ ಸರ್ವರು ಸಹಕರಿಸಿದರು