ಬ್ರಹ್ಮಾವರ : ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಮತ್ತುಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಇವರ ಸಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ ಬಿ ಎಸ್ ಸಿ ಟ್ರೋಫಿ ಅಕ್ಟೋಬರ್ 20ರಂದು ಬ್ರಹ್ಮಾವರ ಹೆರಂಜೆಯ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿತು. ಈ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಮೈಸೂರು, ಬೆಂಗಳೂರು, ಮಹಾರಾಷ್ಟ್ರ, ಕೇರಳ ಹಾಗೂ ಗೋವಾದಿಂದ ಒಟ್ಟು 270 ಚದುರಂಗದ ಆಟಗಾರರು ಭಾಗವಹಿಸಿದ್ದರು.
ಈ ಪಂದ್ಯಾಟದ ಉದ್ಘಾಟನೆಯನ್ನು ಶ್ರೀಯುತ ಸಂಪತ್ ಕುಮಾರ್ ಶೆಟ್ಟಿ, ಮಾಲಕರು, ಶ್ರೀ ಕೃಷ್ಣ ಪ್ರಸಾದ್ ಕ್ಯಾಶೂಸ್ ಪ್ರೈವೇಟ್ ಲಿಮಿಟೆಡ್, ವಂಡಾರು, ಇವರು ದೀಪ ಬೆಳಗಿಸಿ ಚೆಸ್ ಆಟಗಾರರಿಗೆ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಶ್ರೀಯುತ ಉಮಾನಾಥ್ ಕಾಪು, ಅಧ್ಯಕ್ಷರು, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್, ಆಗಮಿಸಿ ಚೆಸ್ ಆಟಗಾರರನ್ನು ಹುರಿದುಂಬಿಸಿದರು. ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಸಂಘಟನಾ ಕಾರ್ಯದರ್ಶಿ ಹಾಗೂ ಈ ಪಂದ್ಯಾಟದ ರೂವಾರಿ ಶ್ರೀಯುತ ಬಿಜು ನಾಯರ್ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಇರುವಂತಹ ವ್ಯವಸ್ಥೆಗಳನ್ನ ಕ್ರೀಡಾಳುಗಳು ಉಪಯೋಗಿಸ ಬೇಕು ಅಂತ ಕರೆ ನೀಡಿದರು.
ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಯುತ ಎ ಮಹೇಶ್ ಶೆಟ್ಟಿಯವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಮೇಜರ್ ಜಿ ಬಾಲಕೃಷ್ಣ ಶೆಟ್ಟಿ ಯವರು ಸಹಕರಿಸಿದ ಎಲ್ಲರಿಗೂ ವಂದಿಸಿದರು. ಕ್ರೀಡಾ ಕಾರ್ಯದರ್ಶಿ ಗಳಾದ ಶ್ರೀಯುತ ವಿಕ್ರಂ ಪ್ರಭುಗಳು ಕಾರ್ಯಕ್ರಮ ವನ್ನು ನಿರ್ವಹಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಸುದರ್ಶನ್ ಹೆಗ್ಡೆ, ಅಧ್ಯಕ್ಷರು, ಬಂಟರ ಯಾನೆ ನಾಡವರ ಸಂಘ ಬ್ರಹ್ಮಾವರ, ಇವರು ಆಗಮಿಸಿ ಮಕ್ಕಳು ಚದುರಂಗದಂತಹ ಆಟವನ್ನು ಆಡುವುದರ ಮೂಲಕ ಮೊಬೈಲ್ ಉಪಯೋಗಿಸುವುದನ್ನು ಕಡಿಮೆ ಮಾಡಿ ಸಮಯವನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸದು ಪಯೋಗಗೊಳಿಸಬಹುದು ಎಂದು ಕರೆ ನೀಡಿದರು. ಇನ್ನೊರ್ವ ಮುಖ್ಯ ಅತಿಥಿ ಡಾಕ್ಟರ.ಕಿರಣ್ ಕುಮಾರ್ ಶೆಟ್ಟಿ, ದಂತ ವೈದ್ಯರು, ಶ್ರೀ ದುರ್ಗಾ ಕ್ಲಿನಿಕ್, ಬ್ರಹ್ಮಾವರ ಇವರು ಪ್ರಶಸ್ತಿಯನ್ನು ಪಡೆದ ಎಲ್ಲಾ ಚೆಸ್ ಆಟಗಾರರಿಗೆ ಶುಭಾಶಯಗಳನ್ನು ಕೋರಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ಬಿನ ಉಪಾಧ್ಯಕ್ಷರಾದ ಶ್ರೀಯುತ ಚಂದ್ರಶೇಖರ್ ಶೆಟ್ಟಿ, ಮಾಲಕರು, ಸಿಟಿ ಸೆಂಟರ್ ಬ್ರಹ್ಮಾವರ, ಇವರು ವಹಿಸಿದ್ದರು. ಶ್ರೀಮತಿ ಸೋನಿಯ ದೇವದಾಸ್ ಶೆಟ್ಟಿ , ಶ್ರೀಮತಿ ಸೌಮ್ಯ ಪ್ರಮೋದ್ ಶೆಟ್ಟಿ, ಶ್ರೀಮತಿ ವಿಚಿತ್ರ ಬಿಜು ನಾಯರ್, ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ ಬಿಜು ನಾಯರ್, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಉಮಾನಾಥ ಕಾಪು ಎಲ್ಲರೂ ವೇದಿಕೆಯಲ್ಲಿದ್ದು ವಿಜೇತರಿಗೆ ಪ್ರಶಸ್ತಿ ಪತ್ರ, ಟ್ರೋಫಿ ಹಾಗೂ ನಗದು ಬಹುಮಾನ ವಿತರಣೆ ಮಾಡಿದರು.
ಶ್ರೀ ಅಜಿತ್ ಎಮ್ ಪಿ, ಮೈಸೂರು, ಇವರು ಚಾಂಪಿಯನ್ ಆಗಿ ಮೂಡಿ ಬಂದರು, ದ್ವಿತೀಯ ಬಹುಮಾನವನ್ನು ಶ್ರೀ ಚಿನ್ಮಯ್ ಎಸ್ ಭಟ್, ಉಡುಪಿ ಹಾಗೂ ತೃತೀಯ ಬಹುಮಾನವನ್ನು ಶ್ರೀ ಲಕ್ಷಿತ್ ಬಿ ಸಾಲಿಯಾನ್, ಮಂಗಳೂರು, ಇವರು ಪಡೆದುಕೊಂಡರು. ತಂಡ ಪ್ರಶಸ್ತಿ – ಶ್ರೀ ಸಿದ್ಧಿ ವಿನಾಯಕ ಚೆಸ್ ಅಕಾಡೆಮಿ,ಬೈಂದೂರ್ -ಪ್ರಥಮ,
ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ಮತ್ತು ಉಡುಪಿ – ದ್ವಿತೀಯ
ಹಾಗೂ ಮಾಸ್ಟರ್ ಚೆಸ್ ಕ್ಲಾಸ್, ಬದಿಯಡ್ಕ – ತೃತೀಯ ಬಹುಮಾನವನ್ನ ಪಡೆದುಕೊಂಡರು. ಕಾರ್ಯದರ್ಶಿಗಳಾದ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಇವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿಗಳಾದ ಶ್ರೀಯುತ ವಿಕ್ರಂ ಪ್ರಭುಗಳು ಕಾರ್ಯಕ್ರಮವನ್ನ ನಿರ್ವಹಣೆ ಮಾಡಿ ಚೆಸ್ ಪಂದ್ಯಾಟದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ವನ್ನು ತಿಳಿಸಿದರು.