ಕೋಟೇಶ್ವರ : ದೀಪಾವಳಿ ಹಬ್ಬದ ಅಂಗವಾಗಿ ಶಾಲಾ ಕಟ್ಟಡವು ಜಗಮಗಿಸುವ ಬೆಳಕಿನ ಜೊತೆ ಸಾಲು ಸಾಲು ದೀಪಗಳು , ಬಣ್ಣ ಬಣ್ಣದ ರಂಗೋಲಿ ಗಳು ಹಬ್ಬದ ಸಂಭ್ರಮ ಹೆಚ್ಚಿಸಿದವು, ಹಬ್ಬದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಾಹಕಿ ಶ್ರೀಮತಿ ಅನುಪಮಾ.ಎಸ್. ಶೆಟ್ಟಿ ಮಾತನಾಡಿ ದೀಪಾವಳಿ ಹಬ್ಬವು ಕತ್ತಲೆಯಿಂದ ಬೆಳಕಿನೆಡೆಗೆ ಹೋಗುವುದರ ಸಂಕೇತ ಜೊತೆ ಜೊತೆಗೆ ನಮ್ಮಲ್ಲಿರುವ ಋಣಾತ್ಮಕ ಮನೋಭಾವವನ್ನು ಹೋಗಲಾಡಿಸಿ ಧನಾತ್ಮಕ ಭಾವನೆಗಳನ್ನು ಹೆಚ್ಚಾಗಿಸುವ ಒಳಾರ್ಥ ಒಂದು ಕಡೆ, ಅಷ್ಟೇ ಅಲ್ಲದೆ ಹೊರಗಿನ ಕ್ರೀಮಿ ಕೀಟಗಳ ತೊಂದರೆಯಿಂದ ತಪ್ಪಿಸಿಕೊಳ್ಳಲು ಸಂಜೆಯ ಸಮಯದಲ್ಲಿ ಮನೆಗಳಲ್ಲಿ ದೀಪಗಳನ್ನು ಹಚ್ಚುವುದು ಹಿರಿಯರ ವಾಡಿಕೆ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳೆಲ್ಲ ಮುಗಿದು ಅದರ ಫಸಲನ್ನು ಸಂಭ್ರಮಿಸುವ ಅಂಶವು ಕೂಡ ಈ ಆಚರಣೆಯ ವಿಶೇಷತೆ ಎಂದು ಮಕ್ಕಳಿಗೆ ಮಾಹಿತಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ.ಸುನಿಲ್ ಪ್ಯಾಟ್ರಿಕ್, ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೀಪಾವಳಿಯ ಮಹತ್ವವನ್ನು ಕುಮಾರಿ.ಅಶ್ವಿತಾ ವಿದ್ಯಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಕೀರ್ತಿ ನಿರೂಪಿಸಿ ವಂದಿಸಿದರು