Home » ತ್ರಿಶಾ ಕಾಲೇಜಿನಲ್ಲಿ ರಕ್ತದಾನ ಶಿಬಿರ
 

ತ್ರಿಶಾ ಕಾಲೇಜಿನಲ್ಲಿ ರಕ್ತದಾನ ಶಿಬಿರ

by Kundapur Xpress
Spread the love

 

ಮಂಗಳೂರು : ತ್ರಿಶಾ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ನೇತ್ರಾವತಿ ಹಾಗೂ HDFC ಬ್ಯಾಂಕ್ ಮಂಗಳೂರು ಹಾಗೂ IRCS ಬ್ಲಡ್ ಬ್ಯಾಂಕ್ ಮಂಗಳೂರಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಅತಿಥಿಗಳಾಗಿ ಆಗಮಿಸಿದ್ದ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ್ ಕಾಯರ್ ಕಟ್ಟೆ ಅವರು “ರಕ್ತದಾನ ಮಹಾದಾನ”, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ರಕ್ತದಾನ ಬಹಳ ಮಹತ್ವವಾದದ್ದು ಆಗಿದೆ ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕೆಂದು ಎಂದರು. ಹಾಗೂ  ಲಯನ್ಸ್ ಕ್ಲಬ್ ನೇತ್ರಾವತಿಯ ರಕ್ತದಾನ ಶಿಬಿರದ ರಾಯಭಾರಿಯಾದ, 262 ರಕ್ತದಾನ ಶಿಬಿರವನ್ನು ಆಯೋಜಿಸಿದ ಲಯನ್ಸ್ ನಾಗೇಶ್ ಎಂಜೆಎಫ್ ಅವರು ಯಾವುದೇ ಜಾತಿ, ಮತ, ಪಂಥ ಆದರೂ ನಮ್ಮೆಲ್ಲರ ರಕ್ತದ ಬಣ್ಣ ಕೆಂಪು. ರಕ್ತದಾನ ಎಂಬುದು ಶ್ರೇಷ್ಠವಾದದು, ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ್ ಕಾಮತ್  ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಿರ್ಮಲ ಪ್ರಮೋದ್, ಅಸೋಸಿಯೇಟ್ ಕ್ಯಾಬಿನೆಟ್ ಸೆಕ್ರೆಟರಿ ಶ್ರೀಮತಿ ಆಶಾ ನಾಗರಾಜ್ , IRCS ಬ್ಯಾಂಕ್ ನ ಜಿಲ್ಲಾ ಸಂಯೋಜಕರಾದ ಶ್ರೀಯುತ ಪ್ರವೀಣ್ ಕುಮಾರ್ , HDFC ಬ್ಯಾಂಕ್  ಮ್ಯಾನೇಜರ್ ಲಕ್ಷ್ಮೀ ಉಪಾಕ್ಷ ಹಾಗೂ ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರು ಪ್ರೊ. ಸುಪ್ರಭಾ,  ವೈ ಆರ್ ಸಿ ಕಾರ್ಯಕ್ರಮ ಅಧಿಕಾರಿ ಪ್ರೊ. ಶಿಲ್ಪಾ ಶೆಟ್ಟಿ ಹಾಗೂ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಶಿವಕುಮಾರ್ ಎಂ ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು  ವಿದ್ಯಾರ್ಥಿನಿ ಜುಬೈದ ಸಮ್ರಾ ನಿರೂಪಿಸಿ, ಖುಷಿ ವಂದಿಸಿದರು. 85 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

 

Related Articles

error: Content is protected !!