Home » ಶಾರದ ವಸತಿ ಶಾಲೆಗೆ ಬಾಂಬ್‌ ಬೆದರಿಕೆ
 

ಶಾರದ ವಸತಿ ಶಾಲೆಗೆ ಬಾಂಬ್‌ ಬೆದರಿಕೆ

by Kundapur Xpress
Spread the love

ಉಡುಪಿ : ನಗರದ ಕುಂಜಿಬೆಟ್ಟುವಿನಲ್ಲಿರುವ ಶಾರದಾ ವಸತಿ ಶಾಲೆಗೆ ಸೋಮವಾರ ಇ ಮೇಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಲಾಗಿದೆ.

ಸೋಮವಾರ ಬೆಳಗ್ಗಿನ ಜಾವ ಸುಮಾರು 4.45 ಕೈ ಶಾಲೆಯ ಇ-ಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಬೆಳಗ್ಗೆ 8.00 ಗಂಟೆಯ ಸುಮಾರಿಗೆ ಶಾಲೆಯ ಇ-ಮೇಲ್ ಪರಿಶೀಲನೆ ವೇಳೆ ಇದು ತಿಳಿದು ಬಂದಿದೆ. ತಕ್ಷಣವೇ ಶಾಲಾಡಳಿತ ಮಂಡಳಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಶ್ವಾನದಳ ದೌಡು

ಬಾಂಬ್ ಬೆದರಿಕೆಯ ಮಾಹಿತಿ ಪಡೆದ ತಕ್ಷಣ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಪ್ರಭು ಅವರ ನೇತೃತ್ವದಲ್ಲಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳವು ಶಾಲೆಯ ವಠಾರ, ತರಗತಿಗಳನ್ನು ತಪಾಸಣೆ ನಡೆಸಿ, ಬಾಂಬ್ ಗಾಗಿ ಶೋಧ ನಡೆಸಿತು. ಯಾವ ಕುರುಹುಗಳು ಪತ್ತೆಯಾಗದೇ ಇದ್ದರಿಂದ ಶಾಲಾಡಳಿತ ಮಂಡಳಿ, ಪೋಷಕರು ನಿರಾಳರಾದರು.

ಮಕ್ಕಳನ್ನು ಹೊರಗೆ ಕಳುಹಿಸಲಾಯಿತು

ಇಮೇಲ್ ಪರಿಶೀಲಿಸಿದಾಗ ದೊರಕಿದ ಮಾಹಿತಿಯಿಂದ ತಕ್ಷಣ ಜಾಗೃತರಾದ ಶಾಲಾಡಳಿತ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಕ್ಕೆ ಕಳುಹಿಸಿ, ಮುಂಜಾಗ್ರತೆ ವಹಿಸಿದ್ದರು. 15 ದೇಶದ 20 ರಾಜ್ಯಗಳ ಸುಮಾರು 816 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

 

Related Articles

error: Content is protected !!