Home » ಸೀತಾರಾಮಚಂದ್ರ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ
 

ಸೀತಾರಾಮಚಂದ್ರ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ

by Kundapur Xpress
Spread the love

ಕುಂದಾಪುರ : ಕುಂದಾಪುರದ ರಾಮಕ್ಷತ್ರಿಯರ ಸಂಘ ಕುಂದಾಪುರ ರಾಮಕ್ಷತ್ರಿಯ ಮಹಿಳಾ ಮಂಡಳಿ ಹಾಗೂ ರಾಮಕ್ಷತ್ರಿಯ ಯುವಕ ಮಂಡಳಿಯ ವತಿಯಿಂದ ನಗರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವವು ವಿಜೃಂಭಣೆಯಿಂದ ಜರುಗಿತು 

ಶ್ರೀ ಸೀತಾರಾಮಚಂದ್ರ ದೇವರಿಗೆ ವಿಶೇಷ ಅಲಂಕಾರದೊಂದಿಗೆ ದೇಗುಲದ ಸುತ್ತಲೂ ಹಣತೆಗಳಿಂದ ದೀಪ ಬೆಳಗುವುದರೊಂದಿಗೆ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು ಸಂಜೆಯಿಂದಲೇ ರಾಮಕ್ಷತ್ರಿಯ ಮಹಿಳಾ ಮಂಡಳಿಯವರಿಂದ ಶ್ರೀ ಶಂಕರ ಚರಿತೆ ಹನುಮಾನ್‌ ಚಾಲಿಸ್‌ ವಿಷ್ಣು ಸಹಸ್ರನಾಮಗಳ ಪಠಣ  ನಡೆಯಿತು ದೇಗುಲದ ಮುಖ್ಯ ಅರ್ಚಕರಾದ ಜಯರಾಮ ಉಪಾಧ್ಯಾಯರವರ ನೇತೃತ್ವದಲ್ಲಿ ವಿಶೇಷ ರಂಗಪೂಜೆ ಜರುಗಿ ಪ್ರಸಾದ ವಿತರಣೆಯಾಯಿತು

ಈ ಸಂದರ್ಭದಲ್ಲಿ ರಾಮಕ್ಷತ್ರಿಯರ ಸಂಘ ಅಧ್ಕಕ್ಷರಾದ ಲಕ್ಷ್ಮೀಶ್‌ ಹವಲ್ದಾರ್‌  ರಾಮಕ್ಷತ್ರಿಯ ಮಹಿಳಾ ಮಂಡಳಿ ಅಧ್ಕಕ್ಷರಾದ ಸರೋಜಾ ಅರುಣ್‌ ಕುಮಾರ್ ಹಾಗೂ ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಕಕ್ಷರಾದ‌ ಪ್ರಭಾಕರ ನೇರಂಬಳ್ಳಿ ಹಿರಿಯರಾದ ಬಾಣಾ ದೇವರಾಯ್‌ ಹಾಡಿಮನೆ ಶಂಕರ್‌ ಶೇರಿಗಾರ್‌ ಯು.ರಾಧಾಕೃಷ್ನ ನಾಗರಾಜ್‌ ನಾಯ್ಕ್‌ ಡಿ ಸತೀಶ್‌ ಶ್ರೀಮತಿ  ರಶ್ಮೀರಾಜ್‌ ಶ್ರೀಮತಿ ದೇವಕಿ ಸಣ್ಣಯ್ಯ ಮುಂತಾದವರು ಉಪಸ್ಥಿತರಿದ್ದರು

 

Related Articles

error: Content is protected !!