ಕಾಪು : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಕಲಚೇತನರಿಗೆ ಮಂಜೂರಾಗಿದ ಶ್ರವಣ ಸಾಧನ ಸಲಕರಣೆಗಳನ್ನು ದಿನಾಂಕ 28-01-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ತಮ್ಮ ಕಾಪು ಶಾಸಕರ ಕಚೇರಿಯಲ್ಲಿ ವಿತರಿಸಿದರು.
ಅಲೆವೂರು ಗ್ರಾಮದ ನಿವಾಸಿ ಸಂದೀಪ ಬಿನ್ ಎಲ್ಲಪ್ಪ ಹಾಗೂ ಬೈರಂಪಳ್ಳಿ ಹರಿಕಂಡಿಕೆ ಗ್ರಾಮದ ಸುಜಾತ ಪೂಜಾರಿ ಕೋ ಸತೀಶ ಪೂಜಾರಿ ಸೇರಿದಂತೆ ಒಟ್ಟು ಎರಡು ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಿಸಿದರು.
ಈ ಸಂದರ್ಭದಲ್ಲಿ ಅಲೆವೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಕಾಂತ್ ನಾಯಕ್, ಶಕ್ತಿ ಕೇಂದ್ರದ ಸತೀಶ್ ಗುಡ್ಡೆಚ್ಚಿ, ಸಂತೋಷ ಉಪಸ್ಥಿತರಿದ್ದರು.