ಕೋಟ : ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಮಾಡಬಾರದು ರಾಜಕಾರಣಿಗಳ ಸಹಕಾರ ಪಡೆದು ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯ ಮಾಡಬೇಕು ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು
ಮಂಗಳವಾರ ಕೋಟದ ಸಮುದ್ಯತಾ ಬ್ಯಾಂಕೇಟ್ ಹಾಲ್ ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ 2025 ವಿಜೇತ ಕಾಂಗ್ರೆಸ್ ಬೆಂಬಲಿತ ಸಹಕಾರಿ ಮಿತ್ರ ಇದರ ಅಭ್ಯರ್ಥಿಗಳ ಮತ್ತು ಕಾರ್ಯಕರ್ತರ ಅಭಿನಂದನಾ ಮತ್ತು ಕೃತಜ್ಞತಾ ಸಭೆ ಜಯಶಾಲಿಯಾದ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಸೋಲೆ ಗೆಲುವಿನ ಮೂಲ ಎಂಬುವುದನ್ನು ಪ್ರತಿಯೊಬ್ಬರು ಮನಗಾಣಬೇಕು,ಸಹಕಾರಿ ಕ್ಷೇತ್ರ ರೈತಪರ ಕ್ಷೇತ್ರವಾಗಿದೆ ಅದನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿ ಒಂದಿಷ್ಟು ಯುವ ಸಮೂಹಕ್ಕೆ ಉದ್ಯೋಗಾವಕಾಶಗಳನ್ನು ನೀಡವಂತ್ತಾಗಬೇಕು,ಕೋಟ ಸಹಕಾರಿ ಸಂಘ ಅಭಿವೃದ್ಧಿಯಲ್ಲಿ ಹಿಂದಿನ ಆಡಳಿತ ಮಂಡಳಿಯ ಜತೆ ಪ್ರಸ್ತುತ ಸಂಘದ ನಿರ್ದೇಶಕರ ಪಾತ್ರ ಗಣನೀಯವಾಗಿದೆ ಎಂದರಲ್ಲದೆ,ಚುನಾವಣೆಯ ಸಂದರ್ಭದಲ್ಲಿ ಆಪಾದನೆಗಳು ಸಹಜ ಹಾಗೇಂದ ಮಾತ್ರಕ್ಕೆ ಅದೇ ಅಂತಿಮವಲ್ಲ ನೀವು ನಿರ್ದಿಷ್ಟವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಿರಿ ಎಂದರ್ಥ ಎಂಬುವುದನ್ನು ಪ್ರಸ್ತುತ ತಂಡಕ್ಕೆ ಕಿವಿಮಾತು ಹೇಳಿ ಜನ ನಿಮ್ಮ ಕಾರ್ಯಕ್ಕೆ ಕೈ ಹಿಡಿದಿದ್ದಾರೆ ಮತ್ತಷ್ಟು ಯಶಸ್ಸಿ ದಾರಿಗೆ ಕೊಂಡ್ಯೋಯುವ ಕಾರ್ಯವಾಗಲಿ ಎಂದು ಹಾರೈಸಿದರು.
ಇದೇ ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಹತ್ತು ಹಾಗೂ ಸೋತ ಮೂವರು ಸಹಕಾರಿ ಮಿತ್ರ ತಂಡದ ಅಭ್ಯರ್ಥಿಗಳನ್ನು ಶಾಲು ಹೋದಿಸಿ ಗೌರವಿಸಿದರು.
ಮುಖ್ಯ ಅಭ್ಯಾಗತರಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನದ ಹೆಗ್ಡೆ,ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಉಪಸ್ಥಿತರಿದ್ದರು.
ಕೋಟ ವ್ಯವಸಾಯಕ ಸಂಘದ ಮಾಜಿ ಅಧ್ಯಕ್ಷ ಭೋಜ ಹೆಗ್ಡೆ,ಬ್ರಹ್ಮಾವರ ತಾಲೂಕು ಕಸಾಪ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ನಿರ್ದೇಶಕರಾದ ಜಿ.ತಿಮ್ಮ ಪೂಜಾರಿ,ಡಾ.ಕೃಷ್ಣ ಕಾಂಚನ್, ಉದಯ್ ಕುಮಾರ್ ಶೆಟ್ಟಿ,ಮಹೇಶ್ ಶೆಟ್ಟಿ, ಟಿ.ಮಂಜುನಾಥ ಗಿಳಿಯಾರು,ವಸಂತಿ ಅಚ್ಯುತ್ ಪೂಜಾರಿ, ರವೀಂದ್ರ ಕಾಮತ್,ನಾಗರಾಜ್ ಹಂದೆ,ಚAದ್ರಪೂಜಾರಿ,ಪರಾಜಿತ ಅಭ್ಯರ್ಥಿಗಳಾದ ರಾಘವೇಂದ್ರ ಮಧ್ಯಸ್ಥ,ಪ್ರೇಮ ಮೆಂಡನ್,ದಿನಕರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮುಖಂಡರಾದ ವಿನಯ್ ಕಬ್ಯಾಡಿ ನಿರೂಪಿಸಿ ವಂದಿಸಿದರು. ಟಿ.ಮMಜುನಾಥ ಗಿಳಿಯಾರ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು