ಮಂಗಳೂರು : ಮಂಗಳೂರು ಹೊರವಲಯದ ಸುರತ್ಕಲ್ನ ಚೇಳ್ಯಾರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸಿನಿಮಾ ಸೆಟ್ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳವಾರ ಸಂಭವಿಸಿದೆ.
ತುಳು ಮತ್ತು ಕನ್ನಡ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ನೆತ್ತರಕೆರೆ’ ಹೆಸರಿನ ಸಿನಿಮಾಗೆ ಹಾಕಿದ ಬಾರ್ನ ಸೆಟ್ನಲ್ಲಿ ದಿಢೀರ್ ಬೆಂಕಿ ಕಾಣಿಸಿದೆ. ಬಾರ್ಗೆ ಹಾಕಿರುವ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು ಸೆಟ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ ಕೂಡಲೇ ಟ್ಯಾಂಕ್ನಲ್ಲಿ ನೀರು ತಂದು ಬೆಂಕಿ ನಂದಿಸಲು ಚಿತ್ರ ತಂಡ ಪ್ರಯತ್ನಿಸಿದೆ. ಆಗಲೇ ಬಾರ್ ಸೆಟ್ ಒಂದು ಭಾಗ ಸಂಪೂರ್ಣ ಸುಟ್ಟುಹೋಗಿತ್ತು. ನೆತ್ತರಕೆರೆ ಸಿನಿಮಾವು ಕಾಂತಾರ ಸಿನಿಮಾದ ಗುರುವ ಪಾತ್ರದ ಖ್ಯಾತಿಯ ಸ್ವರಾಜ್ ಶೆಟ್ಟಿ ನಟನೆಯ ಸಿನಿಮಾವಾಗಿದ್ದು, ನಟನೆ ಜೊತೆ ಈ ಸಿನಿಮಾದ ಚಿತ್ರಕಥೆ ನಿರ್ದೇಶನವನ್ನೂ ಅವರು ಮಾಡಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸರಿಗೆ ದೂರು ನೀಡಲಾಗಿದೆ.