ಕೋಟ : ಇಲ್ಲಿನ ಸಾಲಿಗ್ರಾಮದ ಸಮೀಪ ಗುಂಡ್ಮಿಯ ಮಯ್ಯ ಕುಟುಂಬದ ಮನೆಯೊಂದಕ್ಕೆ ಮಾರಾಟ ನೆಪದಲ್ಲಿ ಬಂದು ದನದ ಕರುವಿನ ಬಾಲ ತುಂಡರಿಸಿ ಕಾಲ್ಕಿತ್ತ ಘಟನೆ ನಡೆದಿದೆ.
ಮಟಮಟ ಮಧ್ಯಾಹ್ನ ಗುಂಡ್ಮಿ ಮಯ್ಯರ ಮನೆಗೆ ಆಗಮಿಸಿದ ಮತಾಂಧ ಸೇಲ್ಸ್ ಮೆನ್ ಒಬ್ಬ ಮನೆಯಾಕೆಯನ್ನು ಕರೆದು ಪ್ರೊಡಕ್ಟ್ ತೆಗೆದುಕೊಳ್ಳಲು ಹೇಳಿದಾಗ ಮನೆಯಾಕೆ ತಿರಸ್ಕರಿಸಿದ್ದಲ್ಲದೆ ಮನೆ ಒಳಗೆ ಪ್ರವೇಶಿಸಿ ಬಾಗಿಲು ಹಾಕಿಕೊಂಡರು. ಇದನ್ನು ಗಮನಿಸಿದ ಸೇಲ್ಸ್ಮೆನ್ ಎರಡು ವರ್ಷದ ದನದ ಕರುವಿನ ಬಾಲ ತುಂಡರಿಸಿ ಅಲ್ಲಿಂದ ಕಾಲ್ಕಿತ್ತ ಎನ್ನಲಾಗಿದೆ.
ಇತ್ತೀಚಿಗಿನ ವಿವಿಧ ಭಾಗಗಳಲ್ಲಿ ಗೋವಿನ ಕೆಚ್ಚಲು ಇನ್ನಿತರ ಅಂಗ ಕತ್ತರಿಸಿದ, ಗೋಗಳ್ಳತನ ಮಾಡಿದ ಪ್ರಕರಣಗಳು ಕಣ್ಣುಂದಿರುವಾಗ ಗುಂಡ್ಮಿ ಪ್ರಕರಣದ ಬಗ್ಗೆ ಸ್ಥಳೀಯ ಹೈನುಗಾರರು ಆತಂಕಕ್ಕೀಡಾಗಿದ್ದು ಗೋವಿನ ಭದ್ರತೆಗಾಗಿ ಕೋಟ ಆರಕ್ಷಕ ಠಾಣೆಯ ಮೆಟ್ಟಿಲು ಹತ್ತಿದ್ದಾರೆ