ಕೋಟ : ಇಲ್ಲಿನ ಪ್ರಸಿದ್ಧ ದೇಗುಲವಾದ ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ,ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಡಿ ದೇಗುಲದ ಸಹಕಾರದೊಂದಿಗೆ 240ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿತು.ಈ ಸಂದರ್ಭದಲ್ಲಿ ದೇಗುಲದ ಸುತ್ತಮುತ್ತಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು. ದೇಗುಲದ ವತಿಯಿಂದ ಪಂಚವರ್ಣ ಸಂಘಟನೆ ಪ್ರಮುಖರಾದ ಸಂತೋಷ್ ಪೂಜಾರಿ ಇವರಿಗೆ ದೇಗುಲದ ಮುಕ್ತೇಸರಾದ ಶ್ರೀರಮಣ ಉಪಾಧ್ಯಾಯ ಶಾಲು ಹೋದಿಸಿ ಪ್ರಸಾದ ವಿತರಿಸಿ ಗೌರವಿಸಿದರು.ದೇಗುಲ ಪ್ರಭಂದಕರು,ಮುಕ್ತೇಸರರರು,ಪಂಚವರ್ಣದ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.