ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲಗಾರರಿಗೆ ಕಿರುಕುಳ ನೀಡಿದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರು. ವರೆಗೆ ದಂಡ ವಿಧಿಸುವ ಮತ್ತು ಲೈಸೆನ್ಸ್ ರದ್ದುಗೊಳಿಸುವ ಮಸೂದೆ ಸಿದ್ದಗೊಂಡಿದೆ ಸಾಲ ನೀಡುವಾಗ ಯಾವುದೇ ಅಡಮಾನ ಪಡೆಯಬಾರದು, ಕಿರುಕುಳ ನೀಡಿದರೆ ಜಾಮೀನುರಹಿತ ಪ್ರಕರಣವೆಂದು ಪರಿಗಣಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮೈಕ್ರೋ ಫೈನಾನ್ಸ್ (ಬಲವಂತ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ-2025’ ಕರಡು ಸಿದ್ದಗೊಂಡಿದ್ದು ಅಂಗೀಕಾರಕ್ಕಾಗಿ ಶೀಘ್ರವೇ ರಾಜ್ಯಪಾಲರ ಅಂಗಳಕ್ಕೆ ಕಳಿಸಿಕೊಡಲಾಗುತ್ತದೆ
ಕರಡು ಸುಗ್ರೀವಾಜ್ಞೆಯಲ್ಲಿ ಏನೇನಿದೆ?
• ಸಾಲ ವಸೂಲಿ ಹೆಸರಲ್ಲಿ ಸಾಲಗಾರರಿಗೆ ಹಿಂಸೆ, ಹಲ್ಲೆ, ಅವಮಾನ ಮಾಡುವಂತಿಲ್ಲ
• ಬಲವಂತವಾಗಿ ಸ್ಥಿರಾಸ್ತಿ, ದಾಖಲೆ ಕಸಿದು ದಬ್ಬಾಳಿಕೆ, ದೌರ್ಜನ್ಯ ಎಸಗುವಂತಿಲ್ಲ
• ಸಾಲ ವಸೂಲಾತಿಗೆ ಗೂಂಡಾಗಳ ಬಳಕೆ, ಮನೆಗೆ ಭೇಟಿ ನೀಡುವುದು ಅಪರಾಧ
• ಸಾಲಗಾರರ ದೈನಂದಿನ ಕೆಲಸಗಳಿಗೆ ತೊಂದರೆ ಉಂಟು ಮಾಡಿದರೆ ಲೈಸೆನ್ಸ್ ರದ್ದು
• ಗ್ರಾಹಕರಿಂದ ಸ್ವೀಕರಿಸಲಾದ ಹಣಕ್ಕೆ ಸಹಿ ಮಾಡಲಾದ ರಶೀದಿಯನ್ನು ನೀಡಬೇಕು
• ಸಾಲ ಪಡೆದವರು ಬಡ್ಡಿ, ಕಂತು ಪಾವತಿ ವಿವರ ಕೇಳಿದರೆ ಸಂಸ್ಥೆಗಳು ಕೊಡಬೇಕು
• ಮೈಕ್ರೋ ಫೈನಾನ್ಸ್‌ಗಳು ಕಡ್ಡಾಯವಾಗಿ ಸ್ಥಳೀಯ ಕಚೇರಿಯನ್ನು ಹೊಂದಿರಬೇಕು

