Home » ಜನರಿಂದ, ಜನರಿಗಾಗಿ, ಜನರಿಗೋಸ್ಕರ ಬಜೆಟ್
 

ಜನರಿಂದ, ಜನರಿಗಾಗಿ, ಜನರಿಗೋಸ್ಕರ ಬಜೆಟ್

ಸಚಿವೆ ನಿರ್ಮಲಾ ಸೀತಾರಾಮನ್

by Kundapur Xpress
Spread the love

ಹೊಸದಿಲ್ಲಿ: ಕೇಂದ್ರ ಬಜೆಟ್ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಮಂಡಿಸಲಾಗಿದೆ ಎಂದು ಭಾನುವಾರ 2025-26ರ ಆಯವ್ಯಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಣ್ಣಿಸಿದರು.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸೀತಾರಾಮನ್, ಪ್ರಧಾನಿ/ನರೇಂದ್ರ ಮೋದಿ ಮಾಧ್ಯಮ ವರ್ಗದವರಿಗೆ ತೆರಿಗೆ ಕಡಿತಗೊಳಿಸಲು ಸಂಪೂರ್ಣ ಬದ್ದರಾಗಿದ್ದರು. ಈ ಹಿಂದೆಯೇ ಇದು ಜಾರಿಗೊಳ್ಳಬೇಕಿತ್ತು. ಆದರೆ, ಈ ಬಗ್ಗೆ ಅಧಿಕಾರಿಗಳ ಮನವೊಲಿಸಲು ಸಮಯ ಹಿಡಿಯಿತು ಎಂದು ಹೇಳಿದರು.

ಬಜೆಟ್‌ನ ನೀತಿಯನ್ನು ವಿವರಿಸಿದ ಸೀತಾರಾಮನ್, ಅಬ್ರಹಾಂ ಲಿಂಕನ್ ಅವರು ಹೇಳಿದಂತೆ, ಪ್ರಜಾಪ್ರಭುತ್ವದಲ್ಲಿ ಇದು ಜನರಿಂದ, ಜನರಿಗಾಗಿ ಜನರಿಗೋಸ್ಕರ ಬಜೆಟ್ ಎಂದು ಹೇಳಿದರು. ಪ್ರಾಮಾಣಿಕ ತೆರಿಗೆದಾರರಾಗಿದ್ದರೂ ತಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಪ್ರತಿ ಬಾರಿ ದೂರುತ್ತಿದ್ದ ಮಧ್ಯಮ ವರ್ಗದವರ ಧ್ವನಿ ಆಲಿಸಿದ್ದೇವೆ. ಹಾಗಾಗಿಯೇ ದೇಶದ ಮಧ್ಯಮ ವರ್ಗದವರಿಗೆ ಈ ಬಾರಿ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗಿದೆ. ಆ ಮೂಲಕ ಕೇಂದ್ರ ಅವರ ಆಕಾಂಕ್ಷೆಗಳಿಗೆ ಸ್ಪಂದಿಸಿದೆ. ಮಧ್ಯಮ ವರ್ಗದವರ ಧ್ವನಿಗೆ ನಾವು ಕಿವಿಯಾಗಿದ್ದೇವೆ ಎಂದರು.

 

Related Articles

error: Content is protected !!