Home » ಯಂಗ್‌ ಇಂಡಿಯಾ ಮುಡಿಗೆ ವಿಶ್ವಕಪ್‌ ಕಿರೀಟ
 

ಯಂಗ್‌ ಇಂಡಿಯಾ ಮುಡಿಗೆ ವಿಶ್ವಕಪ್‌ ಕಿರೀಟ

ಅಂಡರ್‌ - 19 ಮಹಿಳಾ ಟಿ-20 ವಿಶ್ವಕಪ್

by Kundapur Xpress
Spread the love

ಕೌಲಾಲಾಂಪುರ : ತ್ರಿಶಾ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ತಂಡದ ಸಾಂಘಿಕ ಬೌಲಿಂಗ್ ದಾಳಿಯಿಂದಾಗಿ ಭಾರತ ವನಿತಾ ತಂಡವು, 19 ವರ್ಷದ ಒಳಗಿನ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಒಂದೂ ಪಂದ್ಯದಲ್ಲಿ ಸೋಲು ಕಾಣದೆ ಗೆಲುವು ಸಾಧಿಸಿದೆ. ಇದರೊಂದಿಗೆ ಟಿ-20 ವಿಶ್ವಕಪ್‌ನ ನಂತರ ಭಾರತವು ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದೆ. ಮೊದಲ ಪಂದ್ಯದಿಂದಲೂ ಭಾರೀ ಪ್ರದರ್ಶನ ನೀಡಿದ ಕನ್ನಡತಿ ನಿಕಿತಾ ನೇತೃತ್ವದ ತಂಡವು ಫೈನಲ್ ಪಂದ್ಯದಲ್ಲೂ ತನ್ನ ಅಬ್ಬರ ಮುಂದುವರಿಸಿತು. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡವು ಟೂರ್ನಿಯುದ್ದಕ್ಕೂ ಆಡಿದ ಎಲ್ಲ ಪಂದ್ಯಗಳನ್ನೂ ಗೆದ್ದು ಬೀಗಿತ್ತು

ಫೈನಲ್ ಪಂದ್ಯದಲ್ಲಿ ಅದನ್ನು ಮುಂದುವರಿಸಿ ಸತತ ಎರಡನೇ ಬಾರಿ ಬಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಲ್ಲಿ ನಡೆದ ಭಾರತ ಹಾಗೂ ದ.ಆಫ್ರಿಕಾ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 82 ರನ್‌ ಗಳಿಗೆ ಸರ್ವಪತನ ಕಂಡಿತು. ಈ ಬಳಿಕ ಬ್ಯಾಟಿಂಗ್ ಮಾಡಿದ ಭಾರತ 1 ವಿಕೆಟ್ ಕಳೆದುಕೊಂಡು 84 ರನ್ ಗಳಿಸಿ ಗೆಲುವು ಸಾಧಿಸಿ ವಿಶ್ವಕಪ್‌ ಕಿರೀಟವನ್ನು ತನ್ನದಾಗಿಸಿಕೊಂಡಿದೆ

 

Related Articles

error: Content is protected !!