ಉಡುಪಿ : ಶಸ್ತ್ರ ತ್ಯಜಿಸಿ ದಶಕ ಕಳೆದಿದ್ದರೂ, ಕರ್ನಾಟಕ ರಾಜ್ಯದಲ್ಲಿ ಅಧಿಕೃತವಾಗಿ ಶರಣಾಗದೆ ಆಂಧ್ರಪ್ರದೇಶದಲ್ಲಿ ಕೌಟುಂಬಿಕ ಜೀವನ ನಡೆಸುತ್ತಿದ್ದ ನಕ್ಸಲ್’ ತೊಂಬಟ್ಟು ಲಕ್ಷ್ಮೀ ಆಂಧ್ರಪ್ರದೇಶದ ಮುಖ್ಯವಾಹಿನಿಯಿಂದ ಕರ್ನಾಟಕದಲ್ಲಿ ಮುಖ್ಯವಾಹಿನಿಗೆ ಆಗಮಿಸಿ, ಜೈಲು ಸೇರಿದ ಅಪರೂಪದ ವಿದ್ಯಮಾನ ಭಾನುವಾರ ನಡೆಯಿತು.
ಬೆಳಗ್ಗೆ 11.00 ಗಂಟೆಗೆ ರಾಜ್ಯ ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯ ಶ್ರೀಪಾಲ್ ಅವರೊಂದಿಗೆ ಬ್ರಹ್ಮಗಿರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದಳು. ಎಸ್ಪಿ ಡಾ.ಅರುಣ್ ಹಾಗೂ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಎಎನ್‌ಎಫ್ ಇನ್ಸ್‌ಪೆಕ್ಟರ್ ಸತೀಶ್ ಕಾನೂನು ಪ್ರಕ್ರಿಯೆ ನಡೆಸಿದರು.
ನಂತರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ತೆರಳಲಾಯಿತು. ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರ ನೇತೃತ್ವದ ಜಿಲ್ಲಾಮಟ್ಟದ ನಕ್ಸಲ್ ಶರಣಾಗತಿ ಸಮಿತಿಯ ಮುಂದೆ ಲಕ್ಷ್ಮೀ ಶರಣಾದಳು ಅಲ್ಲಿ ಪ್ರಕ್ರೀಯೆ ಮುಗಿಸಿದ ಬಳಿಕ ಅವಳನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು ಅವಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ