ಗದಗ : ಬಿಜೆಪಿಯಲ್ಲಿನ ರಾಜ್ಯದ ಸಮಸ್ಯೆಗಳಿಗೆ ಪರಿಹಾರದ ಮೂಗುದಾರ ಹಾಕುವ ಶಕ್ತಿ ರಾಷ್ಟ್ರೀಯ ನಾಯಕರಿಗೆ ಇದೆ. ರಾಜ ಕಾರಣದಲ್ಲಿ ಮುಚ್ಚು ಮರೆ ಮಾಡುವದಕ್ಕೆ ಆಗುವುದಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು. ಅವರು ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ್, ರಮೇಶ ಜಾರಕಿಹೋಳಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ಹೋಗಿದ್ದಾರೆ. ಚರ್ಚೆ ಮಾಡಿಕೊಂಡು ಎಲ್ಲರನ್ನು ಕರೆಸಿಕೊಂಡು ಯಾರು ತಪ್ಪಿತಸ್ಥರು ಅನ್ನುವುದನ್ನು ತಿಳಿಸಬೇಕಾಗಿದೆ ಎಂದರು.
ಎಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಅದೇ ಮುಂದಿನ ದಿನದ ಸಂಕಲ್ಪ ಕೇಂದ್ರದ ನಾಯಕರು ಮೂಗುದಾರ ಹಾಕುವ ಕೆಲಸ ಮಾಡುತ್ತಾರೆ. ಎಲ್ಲರನ್ನೂ ಒಂದೇ ಪ್ಲಾಟ್ ಫಾರ್ಮನಲ್ಲಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಕೆಲಸ ಮಾಡುತ್ತಾರೆ ಎಂದರು.
ಪರೋಕ್ಷವಾಗಿ ಜನಾರ್ಧನರಡ್ಡಿ ಹೆಸರು ಪ್ರಸ್ತಾಪಿಸದೇ ಕಿಡಿಕಾರಿದ ಅವರು, ಕೆಲವು ಮಂದಿ ಸ್ವಾರ್ಥಿಗಳು ಪ್ರಚಾರ ಆಗಬೇಕೆಂಬ ಕಲ್ಪನೆ ಇಟ್ಟುಕೊಂಡು ಬೇಗ ದೊಡ್ಡ ನಾಯಕರಾಗಿ ಬಿಂಬಿಸಬೇಕೆಂದು ಪಾಸಿಟಿವಗಿಂತ ನೆಗೆಟಿಟ್ ಮಾತನಾಡುವ ಮಂದಿ ಇರುತ್ತಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ ಬೆಳಗಾವಿ ಕಡೆ ಹೊದರೆ ಜಾರಕಿಹೊಳಿ ಅಧ್ಯಕ್ಷರಾಗಬೇಕು ಎನ್ನುತ್ತಾರೆ. ಬಿಜಾಪೂರ ಬಾಗಲಕೋಟೆಗೆ ಹೋದರೆ ಯತ್ನಾಳ ರಾಜ್ಯಾಧ್ಯಕ್ಷರು ಆಗಬೇಕು ಎನ್ನುತ್ತಾರೆ. ಬೆಂಗಳೂರು ಕಡೆ ಡಾ.ಅಶ್ವಥ್ ನಾರಾಯಣ ಅಧ್ಯಕ್ಷರಾಗಬೇಕು ಎನ್ನುತ್ತಾರೆ. ಅದೇ ರೀತಿ ಬಳ್ಳಾರಿ ಕಡೆ ರಾಮುಲು ಅಧ್ಯಕ್ಷರಾಗಬೇಕು ಎನ್ನುತ್ತಾರೆ ಎನ್ನುವ ಮೂಲಕ ತಾವೂ ಕೂಡಾ ಅಧ್ಯಕ್ಷ ಆಕಾಂಕ್ಷಿ ಎಂದರು.