41
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕು, ಪಾಂಡೇಶ್ವರ ವಲಯದ, ಕಾರ್ಕಡ ಪಡುಬೈಲು, ಕಾರ್ಯಕ್ಷೇತ್ರದ ನಾಗರತ್ನ ಐತಾಳ ರವರಿಗೆ ಧರ್ಮಸ್ಥಳದಿಂದ ಪೂಜ್ಯರು ಮತ್ತು ಅಮ್ಮನವರು ಮಂಜೂರು ಮಾಡಿದ ವಾಟರ್ ಬೆಡ್ ಯನ್ನು, ಜನಜಾಗ್ರತೆಯ ತಾಲೂಕು ಮಾಜಿ ಅಧ್ಯಕ್ಷರಾದ ಅಚ್ಯುತ ಪೂಜಾರಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಗಿರಿಜಾ ಶೇಖರ್ ಪೂಜಾರಿ, ಸದಸ್ಯರಾದ ಸಂಜೀವ ದೇವಾಡಿಗ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಅಧ್ಯಕ್ಷರಾದ ರಾಧಾ ಪೂಜಾರಿ , ತಾಲೂಕಿನ ಜಿ.ವಿ.ಕೆ ಸಮನ್ವಯಧಿಕಾರಿ ಯಾದ ಪುಷ್ಪಲತಾ, ವಲಯದ ಮೇಲ್ವಿಚಾರಕರಾದ ಜಯಲಕ್ಷಿ÷್ಮ, ಸೇವಾ ಪ್ರತಿನಿಧಿ ಶಾರದ ಉಪಸ್ಥಿತರಿದ್ದರು
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)