Home » ಬ್ಯಾಂಕಿಗೆ ವಂಚನೆ : 20 ವರ್ಷದ ನಂತರ 3 ವರ್ಷ ಜೈಲುಶಿಕ್ಷೆ
 

ಬ್ಯಾಂಕಿಗೆ ವಂಚನೆ : 20 ವರ್ಷದ ನಂತರ 3 ವರ್ಷ ಜೈಲುಶಿಕ್ಷೆ

ಗೃಹ ನಿರ್ಮಾಣ ಹೆಸರಲ್ಲಿ ವಂಚನೆ

by Kundapur Xpress
Spread the love

ಬೆಂಗಳೂರು : ಬ್ಯಾಂಕ್‌ಗೆ ನಕಲಿ ದಾಖಲೆ ಸಲ್ಲಿಸಿ ವಂಚನೆ ಮಾಡಿದ್ದ ಪ್ರಕರಣದಲ್ಲಿ 20 ವರ್ಷಗಳ ಬಳಿಕ ಮಾಜಿ ಸಚಿವ ಎಸ್. ಎನ್.ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರು ಆರೋಪಿಗಳು ದೋಷಿ ಎಂದು ನಿರ್ಣಯಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಎಲ್ಲಾ ಆರೋಪಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇದೇ ವೇಳೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿದೆ. ಹೀಗಾಗಿ ಕೃಷ್ಣಯ್ಯ ಶೆಟ್ಟಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಸಿಬಿಐ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತೀರ್ಪು ಪ್ರಕಟಿಸಿದರು.

1ನೇ ಆರೋಪಿ ಎಸ್‌ ಬಿ ಐ ಬ್ಯಾಂಕ್‌ನ ವ್ಯವಸ್ಥಾಪಕ ಎಂ.ಟಿ.ವಿ.ರೆಡ್ಡಿ, 2ನೇ ಆರೋಪಿ ಕೃಷ್ಣಯ್ಯ ಶೆಟ್ಟಿ, 3ನೇ ಆರೋಪಿ ಕೆ.ಮುನಿರಾಜು, 4ನೇ ಆರೋಪಿ ಕೆ.ಶ್ರೀನಿವಾಸ್ ತಪ್ಪಿತಸ್ಥರು ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ. 5ನೇ ಆರೋಪಿ ಬಿಡ್ಡಪ್ಪ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ.

 

Related Articles

error: Content is protected !!