Home » ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2025’
 

ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2025’

by Kundapur Xpress
Spread the love

ಬೆಂಗಳೂರು : ಯುದ್ಧ ವಿಮಾನಗಳು, ವೈಮಾನಿಕ, ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿನ ಅತ್ಯಾಧುನಿಕ ಉತ್ಪನ್ನಗಳು, ತಂತ್ರಜ್ಞಾನಗಳ ಪ್ರದರ್ಶನದ ವೇದಿಕೆಯಾಗಿರುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2025’ ಇಂದು ಸೋಮವಾರ ಯಲಹಂಕ ವಾಯುಪಡೆ ನೆಲೆಯಲ್ಲಿ ವಿಧ್ಯುಕ್ತವಾಗಿ ಆರಂಭವಾಗಲಿದೆ.

ಐದು ದಿನಗಳ ಈ ಏರೋ ಇಂಡಿಯಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಗುರಿಗೆ ವೇಗ ನೀಡಲು ರಕ್ಷಣಾ ಕ್ಷೇತ್ರದಲ್ಲಿ ಹೊಸ ಜಾಗತಿಕ ಸಹಭಾಗಿತ್ವಗಳು, ಅತ್ಯಾಧುನಿಕ ಅನ್ವೇಷಣೆಗಳು ಹಾಗೂ ವೈಮಾನಿಕ ಶಕ್ತಿ ಪ್ರದರ್ಶನಕ್ಕೆ ವಾಯುಪಡೆ ನೆಲೆ ವೇದಿಕೆ ಕಲ್ಪಿಸುತ್ತದೆ.

 

Related Articles

error: Content is protected !!