Home » ಟಿಪ್ಪರ್‌ ಅಪಘಾತ : ಚಾಲಕ ಸ್ಥಳದಲ್ಲೇ ಸಾವು
 

ಟಿಪ್ಪರ್‌ ಅಪಘಾತ : ಚಾಲಕ ಸ್ಥಳದಲ್ಲೇ ಸಾವು

by Kundapur Xpress
Spread the love

ಬೈಂದೂರು : ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಜನ್ಮನೆ ಎಂಬಲ್ಲಿ ನಿಯಂತ್ರಣ ತಪ್ಪಿದ ಟಿಪ್ಪರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಚಂದ್ರ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಕಾಲ್ತೊಡು ಕಡೆಯಿಂದ ಎಲ್ಲೂರಿಗೆ ಟಿಪ್ಪರ್‌ ಮಣ್ಣು ತುಂಬಿಸಿಕೊಂಡು ಹೋಗುತ್ತಿರುವಾಗ ಗೋಳಿಹೊಳೆ ಗ್ರಾಮದ ಜನ್ಮನೆ ಎಂಬಲ್ಲಿ ತಿರುವು ಇಳಿಜಾರು ರಸ್ತೆಯಲ್ಲಿ ಟಿಪ್ಪರ್ ಚಾಲಕ ಚಂದ್ರನು ವೇಗವಾಗಿ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರಿಂದ ಟಿಪ್ಪರ್ ಆತನ ಹತೋಟಿ ತಪ್ಪಿ ನೇರವಾಗಿ ತಗ್ಗು ಪ್ರದೇಶಕ್ಕೆ ಹೋಗಿ ಬಿದ್ದು ಮರಕ್ಕೆ ಡಿಕ್ಕಿ ಹೊಡೆದಿದೆ

ಸಾರ್ವಜನಿಕರು ಟಿಪ್ಪರನಲ್ಲಿದ್ದ ಮಹಾಬಲ ಹಾಗೂ ಹನುಮಂತ ಇವರನ್ನು ವಾಹನದಿಂದ ಹೊರಗೆ ತೆಗೆದು ಆಂಬುಲೆನ್ಸ್ ಮೂಲಕ ಕರೆದುಕೊಂಡು ಕುಂದಾಪುರ ಚಿನ್ಮಯ್ ಆಸ್ಪತ್ರೆಗೆ ದಾಖಲಿಸಿದ್ದು ಚಾಲಕ ಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!