Home » ಕಾರು  ಟಿಪ್ಪರ್ ಡಿಕ್ಕಿ : ಚಾಲಕ ಮೃತ್ಯು
 

ಕಾರು  ಟಿಪ್ಪರ್ ಡಿಕ್ಕಿ : ಚಾಲಕ ಮೃತ್ಯು

by Kundapur Xpress
Spread the love

ಕಾಪು : ಕಾರು ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾದ ಪರಿಣಾಮ ಟಿಪ್ಪ‌ರ್ ಅಡಿಗೆ ಬಿದ್ದು ಚಾಲಕ ಮೃತಪಟ್ಟ ಘಟನೆ ಕಾಪು ತಾಲೂಕಿನ ಶಂಕರಪುರ ದುರ್ಗಾನಗರ ಎಂಬಲ್ಲಿ ಸಂಭವಿಸಿದೆ. ಕೊಕ್ಕರ್ಣೆ ನಿವಾಸಿ ಕೃಷ್ಣ ನಾಯ್ಕ (55) ಮೃತಪಟ್ಟ ಚಾಲಕ

ಶಿರ್ವದಿಂದ ಕಟಪಾಡಿ ಕಡೆಗೆ ಬರುತ್ತಿದ್ದ ಟಿಪ್ಪ‌ರ್ ಎದುರಿನಿಂದ ಬರುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಗುಚಿಬಿದ್ದ ಟಿಪ್ಪರ್ ನಿಂದ ಅದರ ಚಾಲಕ ಹೊರಕ್ಕೆ ಹಾರಲು ಪ್ರಯತ್ನಿಸಿದಾಗ ದುರಾದೃಷ್ಟವಶಾತ್ ಟಿಪ್ಪರ್‌ನ ಅಡಿಗೆ ಬಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅತಿ ವೇಗ ಹಾಗೂ ಅಜಾಗರೂಕತೆಯೆ  ಅಪಘಾತಕ್ಕೆ ಕಾರಣವೆಂದು ತಿಳಿದುಬಂದಿದ್ದು ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ

 

Related Articles

error: Content is protected !!