ಬ್ರಹ್ಮಾವರ : ಆಳುಪ, ಹೊಯ್ಸಳ, ವಿಜಯನಗರ ಹಾಗೂ ಕೆಳದಿಯ ಅರಸರ ಆಳ್ವಿಕೆಗೆ ಒಳಪಟ್ಟ ಪ್ರದೇಶ ವಡ್ಡರ್ಸೆ. ಈ ಪ್ರದೇಶವನ್ನು ರಾಜರು ಆಳ್ವಿಕೆ ಮಾಡಿದ ಬಗ್ಗೆ ಐತಿಹಾಸಿಕ ಪುರಾವೆಗಳು ದೊರಕುತ್ತವೆ. ವಡ್ಡರ್ಸೆಯಲ್ಲಿ ದೊರಕಿದ ಪ್ರಾಚೀನ ಶಾಸನದಲ್ಲಿ ಬನ್ನಾಡಿ, ಅಚ್ಲಾಡಿ, ಕಾವಡಿ, ಕೊತ್ತಾಡಿ , ಮುಂತಾದ ಪ್ರದೇಶಗಳಲ್ಲಿ ಉಲ್ಲೇಖವಿದೆ. ಶತಮಾನಗಳ ಇತಿಹಾಸ ಇರುವ ವಡ್ಡರ್ಸೆ ಐತಿಹಾಸಿಕ ಪ್ರಸಿದ್ಧ ಸ್ಥಳ ಎಂದು ಮಾಹೆಯ ಸಾಂಸ್ಕೃತಿಕ ಕೇಂದ್ರಗಳ ಆಡಳಿತ ಅಧಿಕಾರಿಗಳಾದ ಡಾ| ಬಿ. ಜಗದೀಶ್ ಶೆಟ್ಟಿ ಹೇಳಿದರು.
ಅವರು ವಡ್ಡರ್ಸೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಕುಂದಾಪುರದ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ವಡ್ಡರ್ಸೆ ಇತಿಹಾಸ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ| ಕೆ. ಚಂದ್ರಶೇಖರ್ ಶೆಟ್ಟಿ ಕೆರೆಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಶುಭ ಹಾರೈಸಿದರು.
ಈ ಸಂದರ್ಭ ನಿವೃತ್ತ ಅಧ್ಯಾಪಕ ಶಂಕರ್ ಶೆಟ್ಟಿ ಬನ್ನಾಡಿ, ಸರಕಾರಿ ಪ್ರೌಢಶಾಲೆ ವಡ್ದರ್ಸೆಯ ಶಿಕ್ಷಕ ಆನಂದ ಶೆಟ್ಟಿ ಸುಗುಣಾಕರ ಶೆಟ್ಟಿ ಉಪ್ಲಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರಪಾಡಿಯ ಅಧ್ಯಾಪಕ ಪ್ರಶಾಂತ್ ಶೆಟ್ಟಿ ಕೊತ್ತಾಡಿ, ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಪ್ರೀತಿ ಹೆಗ್ಡೆ ಗ್ರಂಥಪಾಲಕ ಮಹೇಶ್ ನಾಯ್ಕ್ ಉಪಸ್ಥಿತರಿದ್ದರು.
ಉಪ-ಪ್ರಾಂಶುಪಾಲ ಹಾಗೂ ಎನ್ಎಸ್ಎಸ್ ಶಿಬಿರಾಧಿಕಾರಿ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಶಿಬಿರಾಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು. ಎನ್.ಎಸ್.ಎಸ್. ಸ್ವಯಂ ಸೇವಕಿ ರಶ್ಮಿತಾ ಸ್ವಾಗತಿಸಿ, ಸ್ಮಿತಾ ವಂದಿಸಿ, ಶರಣ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)