Home » ನಿವ್ರತ್ತ ಉಪನ್ಯಾಸಕರಿಗೆ ಬೀಳ್ಕೊಡುಗೆ
 

ನಿವ್ರತ್ತ ಉಪನ್ಯಾಸಕರಿಗೆ ಬೀಳ್ಕೊಡುಗೆ

by Kundapur Xpress
Spread the love

ಕೋಟ : ఇల్లిన ವಿವೇಕ ವಿದ್ಯಾಸಂಸ್ಥೆಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಿ  28 ವರ್ಷ ಸೇವೆ ಸಲ್ಲಿಸಿ ಇಲಾಖೆಯ ನಿಯಮದಂತೆ ಸೇವಾ ನಿವೃತ್ತಿ ಹೊಂದಿದ ಸಿ.ಮಂಜುನಾಥ್ ಉಪಾಧ್ಯ ಅವರನ್ನು ಕೋಟ ವಿದ್ಯಾ ಸಂಘ ಮತ್ತು ವಿವೇಕ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಕೋಟ ವಿದ್ಯಾಸಂಘದ ಅಧ್ಯಕ್ಷ ಸಿ ಎ ಪಿ.ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ৯০. ರಾಮದೇವ ಐತಾಳ, ಕೋಶಾಧಿಕಾರಿ ವೆಲೇರಿಯನ್ ಮಿನೇಜಸ್ ಉಪಸ್ಥಿತರಿದ್ದರು. ಉಪನ್ಯಾಸಕ ಸಂಜೀವ ಜಿ., ವೆಂಕಟೇಶ ಉಡುಪ, ಮುಖ್ಯ ಶಿಕ್ಷಕ ಜಗದೀಶ ಹೊಳ್ಳ ನಿವೃತ್ತರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.ಪ್ರಿನ್ಸಿಪಾಲ್ ಜಗದೀಶ ನಾವಡ ಸ್ವಾಗತಿಸಿದರು. ಕಚೇರಿ ಸಹಾಯಕಿ ಸಹನಾ ಪ್ರಾರ್ಥಿಸಿದರು. ಪ್ರೇಮಾನಂದ ವಂದಿಸಿದರು. ಚಂದ್ರಶೇಖರ್ ಎಚ್. ಎಸ್. ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!