Home » ಕ್ಯಾಂಪಸ್ ಸಂದರ್ಶನ 70 ವಿದ್ಯಾರ್ಥಿಗಳು ಆಯ್ಕೆ.
 

ಕ್ಯಾಂಪಸ್ ಸಂದರ್ಶನ 70 ವಿದ್ಯಾರ್ಥಿಗಳು ಆಯ್ಕೆ.

ಮೂಡ್ಲಕಟ್ಟೆ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು

by Kundapur Xpress
Spread the love

ಮೂಡ್ಲಕಟ್ಟೆ : ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗವು ಕ್ರಿಯೇಟಿವ್ ಇಂಜಿನಿಯರ್ಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಟಾಟಾ ಎಲೆಕ್ಟ್ರಾನಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಏರ್ಪಡಿಸಿದ ಪೂಲ್ ಕ್ಯಾಂಪಸ್ ಸೆಲೆಕ್ಷನ್ ಯಶಸ್ವಿಯಾಗಿ ನಡೆಯಿತು.

ಸಂದರ್ಶನದಲ್ಲಿ ಐ.ಎಂ.ಜೆ.ಐ.ಎಸ್.ಸಿ ಮೂಡ್ಲಕಟ್ಟೆ ಮತ್ತು ವಿವಿಧ ಪದವಿ ಕಾಲೇಜಿನ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿದ ಹಂತದಲ್ಲಿ ನೆಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಐ.ಎಂ.ಜೆ. ಐ. ಎಸ್. ಸಿ ಪದವಿ ಕಾಲೇಜಿನ 43 ವಿದ್ಯಾರ್ಥಿಗಳು, ಕೋಟೇಶ್ವರ ಸರಕಾರಿ ಪದವಿ ಕಾಲೇಜಿನ 15 ವಿದ್ಯಾರ್ಥಿಗಳು, ಕೋಟ ಪಡುಕೆರೆ ಪದವಿ ಕಾಲೇಜಿನ 5 ವಿದ್ಯಾರ್ಥಿಗಳು, ಬಾರ್ಕುರು ಪದವಿ ಕಾಲೇಜಿನ 7 ವಿದ್ಯಾರ್ಥಿಗಳು ಸೇರಿ ಒಟ್ಟು 70 ವಿದ್ಯಾರ್ಥಿಗಳು ಆಯ್ಕೆಗೊಂಡರು.

ಬೆಳಿಗ್ಗೆ ನೆಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂಪನಿಯ ರಿಕ್ರೂಟ್ಮೆಂಟ್ ಟೀಮ್ ಲೀಡರ್ ಶ್ರೀ ಹಾಲೇಶ್ ಹಿರೇಮಠ್, ‘ಪ್ಲೇಸ್ಮೆಂಟ್ ನ ವಿವಿಧ ಹಂತಗಳು, ಕಂಪನಿಯ ವಿಶೇಷತೆ, ಕಾರ್ಯವ್ಯಾಪ್ತಿ, ಲಭ್ಯವಿರುವ ಹುದ್ದೆಗಳು, ನೌಕರರಿಗೆ ಸಿಗುವ ಪ್ರಯೋಜನಗಳು ಮತ್ತು ಸವಲತ್ತುಗಳು ಹಾಗೂ ಕಂಪನಿಯ ಸಾಧನೆ’ಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ರಿಕ್ರೂಟ್ಮೆಂಟ್ ಮ್ಯಾನೇಜರ್ ಶ್ರೀ ಮಹೇಶ್, ಮ್ಯಾನೇಜರ್ ಶ್ರೀ ಶ್ರೀನಿವಾಸ್ ಉಪಸ್ಥಿತರಿದ್ದರು. ಕಾಲೇಜು ಕ್ಯಾಂಪಸ್ ಆಯ್ಕೆಗೆ ವಿಶೇಷ ಆದ್ಯತೆಯನ್ನು ನೀಡುತ್ತಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ, ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ರವರು ತಿಳಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ಪ್ಲೇಸ್ಮೆಂಟ್ ಆಫೀಸರ್ ರಾದ ಶ್ರೀ ಜಯಶೀಲ್ ಕುಮಾರ್, ಸಹ ಸಂಯೋಜಕರಾದ ಕು. ರಾಜೇಶ್ವರಿ ಆರ್ ಶೆಟ್ಟಿ ಉಪಸ್ಥಿತರಿದ್ದರು. ಕಂಪನಿಯ ಮುಖ್ಯಸ್ಥರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಿಗೆ ಕಂಪೆನಿಯ ಮುಖ್ಯಸ್ಥರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ, ಕು. ರಕ್ಷಿತಾ ಆರ್ ಅಡಿಗ ಕಾರ್ಯಕ್ರಮವನ್ನು ನಿರೂಪಿಸಿದರು

 

Related Articles

error: Content is protected !!