ಕುಂದಾಪುರ : ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಹಾಗೂ ಆರೋಗ್ಯ ವಿಜ್ಞಾನವು ನಡೆಸಿರುವ 2023-24 ನೇ ಸಾಲಿನ ಬಿ.ಎಸ್ಸಿ. ನರ್ಸಿಂಗ್ ಪರೀಕ್ಷೆಯಲ್ಲಿ ತ್ರತೀಯ ವರ್ಷದ 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 8 ವಿದ್ಯಾರ್ಥಿಗಳು ಉನ್ನತ ಶ್ರೇಣಿಯನ್ನು ಪಡೆದಿರುತ್ತಾರೆ, 16 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 1 ವಿಧ್ಯಾರ್ಥಿ ದ್ವಿತೀಯ ದರ್ಜೆ ಶ್ರೇಣಿಯನ್ನು ಪಡೆದು ಶೇಕಡ 96.15% ಗಳಿಸಿರುತ್ತಾರೆ. ದ್ವಿತೀಯಾ ವರ್ಷದ 41ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು,1 ವಿದ್ಯಾರ್ಥಿ ಉನ್ನತ ಶ್ರೇಣಿಯನ್ನು ಪಡೆದಿದ್ದು,20 ವಿಧ್ಯಾರ್ಥಿಗಳು ಪ್ರಥಮಶ್ರೇಣಿ ಹಾಗೂ 12 ವಿಧ್ಯಾರ್ಥಿಗಳು ದ್ವಿತೀಯ ದರ್ಜೆ ಶ್ರೇಣಿಯನ್ನು ಪಡೆದು ಶೇಕಡ 80.48% ಗಳಿಸಿರುತ್ತಾರೆ. ದ್ವಿತೀಯ ಸೆಮಿಸ್ಟರ್ 38 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು,1 ವಿಧ್ಯಾರ್ಥಿ A+,2ವಿಧ್ಯಾರ್ಥಿ A,26 ವಿಧ್ಯಾರ್ಥಿಗಳು B+,7 ವಿಧ್ಯಾರ್ಥಿಗಳು B ಶ್ರೇಣಿಯನ್ನು ಪಡೆದು ಶೇಕಡ 94.73% ಗಳಿಸಿರುತ್ತಾರೆ.