305
ಕೋಟ : ಇತ್ತೀಚಿಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಂಗಾರಕಟ್ಟೆ ಮಾಬುಕಳದ ಚೇತನಾ ಪ್ರೌಢಶಾಲೆಯ ವಿದ್ಯಾರ್ಥಿನಿ ಕು .ವೈಷ್ಣವಿ ಅಲ್ಸೆ ಇವರು 620 ಅಂಕವನ್ನು ಪಡೆದು 6ನೇ ಸ್ಥಾನ ಗಳಿಸಿದ ಇವರನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್‌ರವರ ಸಮ್ಮುಖದಲ್ಲಿ ಶಾಲು ಹೊದಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ನೊಡಲ್ ಅಧಿಕಾರಿ ನಾಗರಾಜ್ ಭಟ್, ಬ್ರಹ್ಮಾವರ ವಲಯದ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ಉಡುಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮನೋಹರ್ ಹೆಗಡೆ, ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ಹಾಗೂ ಸದಾಶಿವ ಅಲ್ಸೆ ಚೇತನ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಉಪಸ್ಥಿತರಿದ್ದರು

