ಕುಂದಾಪುರ :ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ತೆಕ್ಕಟ್ಟೆ ರಮೇಶ್ ನಾಯಕ್ ರವರು ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲೂ ಅಮೂಲ್ಯ ಸಾಧನೆ ಮಾಡುವ ಮೂಲಕ ಪ್ರಧಾನಿ ಮೋದಿಯವರಿಂದ ಬಿಲೆನಿಯರ್ ರೈತ ಪ್ರಶಸ್ತಿ ಪಡೆಯಲಿದ್ದಾರೆ. ಇವರು ಹಣ್ಣುಗಳ ಬಗ್ಗೆ ಇರುವ ಪ್ರೀತಿಯಿಂದ ವಿವಿಧ ಉಪ ಉಷ್ಣ ವಲಯದಲ್ಲಿ ಬೆಳೆಯುವ ವಿಶೇಷ ಹಣ್ಣುಗಳ ಬಗ್ಗೆ ಅಧ್ಯಯನ ಮಾಡಿ ಕೆದೂರು ಗ್ರಾಮದಲ್ಲಿ ಸುಮಾರು 13 ಎಕ್ರೆ ಜಾಗದಲ್ಲಿ ಕಾಮಾಕ್ಷಿ ಫಾರ್ಮ್‌ನ್ನು ಸ್ಥಾಪಿಸಿದ್ದಾರೆ
ವಿವಿಧ ತಳಿಗಳ ಹಣ್ಣುಗಳನ್ನು ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸದೇ ವಾರ್ಷಿಕ ಕೋಟಿ ರೂ.ಗೂ ಅಧಿಕ ವ್ಯವಹಾರ ಮಾಡಿರುವ ಇವರು 11 ಜಾತಿಯ 1634 ತಳಿಯ ಹಣ್ಣಿನ ಗಿಡಗಳನ್ನು ಬೆಳೆಸಿ, ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರೈತ ಪ್ರಶಸ್ತಿಗೆ ಆಯ್ಕೆಯಾದ ಇವರು ತೆಕ್ಕಟ್ಟೆ ಸೇವಾ ಸಂಗಮ ಸ್ಲೂಲ್ ನ ಮಾಜಿ ಅಧ್ಯಕ್ಷರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದು ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ ಇವರ ಕೊಡುಗೆಯನ್ನು ಶ್ಲಾಘಿಸಿದೆ.