67
ಹೆಬ್ರಿ: ಆಗುಂಬೆ ಘಾಟಿಯ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ನಾಲ್ಕನೇ ಸುತ್ತಿನಲ್ಲಿ ಬಸ್ಸ್ ಒಂದು ಕೆಟ್ಟು ನಡು ರಸ್ತೆಯಲ್ಲಿ ನಿಂತ ಪರಿಣಾಮ ಸುಮಾರು 2 ಗಂಟೆಗಳ ಕಾಲ ಘನ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಸುಮಾರು 7.30ರ ಹೊತ್ತಿಗೆ ಬಸ್ ಕೆಟ್ಟು ನಡು ರಸ್ತೆಯಲ್ಲಿ ನಿಂತ ಪರಿಣಾಮ ಕಿಲೋಮೀಟರ್‌ಗಟ್ಟಲೆ ಘನ ವಾಹನಗಳು ಸರತಿ ಸಾಲಿನಲ್ಲಿ ನಿಂತವು. ಕಾರು ಹಾಗೂ ದ್ವಿಚಕ್ರ ವಾಹನಗಳು ಸಂಚಾರ ಮಾಡಲು ಅವಕಾಶವಿದ್ದರೂ, ಸರತಿ ಸಾಲಿನಲ್ಲಿದ್ದ ಕಾರು ಇತರ ವಾಹನಗಳು ಗಂಟೆಗಟ್ಟಲೆ ಕಾಯಬೇಕಾಗಿ ಬಂತು.
ತೀರ್ಥಹಳ್ಳಿ ಉಡುಪಿ ದಿನ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಸಮಸ್ಯೆಯಾಯಿತು ಹೆಬ್ರಿ ಹಾಗೂ ಆಗುಂಬೆ ಪೊಲೀಸರು ಘಾಟಿ ಸಂಚಾರದಲ್ಲಿ ಸಮಸ್ಯೆಯಾಗದಂತೆ ಚೆಕ್‌ಪೋಸ್ಟ್‌ಗಳಲ್ಲಿ ಘನ ವಾಹನ ತಡೆದು ಬದಲಿ ಸಂಚಾರ ಸೂಚಿಸಿದರು.

