ಕುಂದಾಪುರ : ಕಳೆದ ಬುಧವಾರ ಕುಂದಾಪುರದ ಬೀಜಾಡಿಯ ಸಮುದ್ರ ತೀರದಲ್ಲಿ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿಸಮುದ್ರಪಾಲಾದಯೋಗೀಶ್ಮೃತದೇಹ ಇಂದು ಕಾರವಾರದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ
ದಿನಾಂಕ 19.06.2024ರಂದು ತುಮಕೂರು ಜಿಲ್ಲೆಯ ತಿಪಟೂರು ನಿವಾಸಿಯಾದ ಯೋಗೀಶ್ ಹಾಗೂ ಸಂದೀಪ್ ಎಂಬವರು ಮದುವೆ ಕಾರ್ಯಕ್ರಮದ ನಿಮಿತ್ತ ತನ್ನ ಬೈಕಿನಲ್ಲಿ ಕುಂದಾಪುರದ ಬೀಜಾಡಿಗೆ ಬಂದಿದ್ದು ಸಂಜೆಯ ವೇಳೆ ವಿಹಾರಕ್ಕೆಂದು ಬೀಜಾಡಿ ಬಳಿಯ ಸಮುದ್ರ ತೀರಕ್ಕೆ ಹೋಗಿ ನೀರಿಗಿಳಿದಾಗ ಅಲೆಗಳ ರಭಸಕ್ಕೆ ಯೋಗೀಶ್ ಕೊಚ್ಚಿಕೊಂಡು ಹೋಗಿ ಸಮುದ್ರ ಪಾಲಾಗಿದ್ದರು ಆದರೆ ಮಿತ್ರ ಸಂದೀಪ್ನನ್ನು ಸ್ಥಳೀಯರು ರಕ್ಷಿಸಿದ್ದರು
ಕಾರವಾರದ ಕಡಲ ತೀರದಲ್ಲಿ ಪತ್ತೆಯಾದ ಮೃತದೇಹದ ಮುಖದ ಗುರುತು ಸಿಗದಿದ್ದರೂ ಯೋಗೀಶ್ ಧರಿಸಿದ್ದ ಪ್ಯಾಂಟ್ ಬನಿಯನ್ ಬೆಲ್ಟ್ ಹಾಗೂ ಬಲಕಾಲಿಗೆ ಕಟ್ಟಿದ ಕಪ್ಪು ದಾರದ ಆಧಾರದ ಮೇಲೆ ಮೃತದೇಹ ಯೋಗೀಶ್ನದ್ದೇ ಎಂದು ಅವರ ಸಹೋದರ ಮಾವ ಅಶ್ವಥ್ರವರು ತಿಳಿಸಿದ್ದಾರೆ